ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿ ಮುಂದುವರೆದಿದ್ದು, ಹೋಂಸ್ಟೇ ಬಳಿ ಒಂಟಿ ಸಲಗವೊಂದು ಒಡಾಟ ಮಾಡಿರುವ ಘಟನೆ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ದೇವನಗೂಲ್ ಗ್ರಾಮದಲ್ಲಿ ನಡೆದಿದೆ.
ಉದಯಗಿರಿ ಹೋಂ ಸ್ಟೇ ಆವರಣದಲ್ಲಿ ಕಾಡಾನೆ ರೌಂಡ್ಸ್ ಹಾಕಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಾಳೆ, ತೆಂಗು ಬೆಳೆ ಸೇರಿದಂತೆ ಹೋಂಸ್ಟೇ ಬಳಿ ಅಳವಡಿಸಿದ್ದ ತಂತಿ ಬೇಲಿ ಧ್ವಂಸ ಮಾಡಿದ್ದು, ಒಂಟಿ ಸಲಗದ ಸಂಚಾರದಿಂದ ಸ್ಥಳೀಯರು ಆತಂಕದಲ್ಲಿದ್ದಾರೆ. ಕೂಡಲೇ ಕಾಡಾನೆಯನ್ನು ಸ್ಥಳಂತರಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಕ್ಯಾಬೇಜ್ ದರ ಪಾತಾಳಕ್ಕೆ.. ಜಾನುವಾರು ಬಿಟ್ಟು ಬೆಳೆ ನಾಶ ಮಾಡಿದ ರೈತರು



















