ರಾಯಚೂರು : ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಐವರು ನೀರುಪಾಲಾಗಿರುವ ಘಟನೆ ಮಂತ್ರಾಲಯ ಬಳಿಯ ತುಂಗಭದ್ರಾ ನದಿಯಲ್ಲಿ ನಡೆದಿದೆ. ಮೃತರನ್ನು ಹೈದರಾಬಾದ್ ಮೂಲದ ಯುವನ ಚಂದ್ರ(5), ಸತೀಶ್(35), ಮಂತ್ರಾಲಯ ಗ್ರಾಮದ ರಾಘವೇಂದ್ರ(25), ಧನುಷ್(23) ಉರವಕೊಂಡದ ಸಂಧ್ಯಾ(22) ಎಂದು ಗುರುತಿಸಲಾಗಿದೆ. ಮತ್ತೋರ್ವ ಯುವತಿ ಅಪರ್ಣಾ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಂತ್ರಾಲಯದ ಸಂಬಂಧಿಕರ ಮನೆಯಲ್ಲಿನ ಸತ್ಯನಾರಾಯಣ ಪೂಜೆಗೆಂದು ಬಂದಿದ್ದವರು, ಕಾರ್ಯಕ್ರಮದ ಬಳಿಕ ಈಜಲೆಂದು ತುಂಗಭದ್ರಾ ನದಿಗೆ ತೆರಳಿದ್ದರು. ಈ ವೇಳೆ ನದಿಯ ನೀರಿನ ಆ ತಿಳಿಯದೆ ಈಜಲು ಹೋಗಿ ಐವರು ಜಲ ಸಮಾಧಿಯಾಗಿದ್ದಾರೆ.
ಮೃತರ ಪೈಕಿ ಇದುವರೆಗೆ ಮೂವರ ಮೃತದೇಹ ಪತ್ತೆಯಾಗಿದ್ದು, ಉಳಿದವರಿಗಾಗಿ ಸ್ಥಳದಲ್ಲಿ ಶೋಧ ಮುಂದುವರಿದಿದೆ. ಮೃತದೇಹಗಳಿಗಾಗಿ ಮೀನುಗಾರರು ಹುಡುಕಾಟ ನಡೆಸುತ್ತಿದ್ದು ಎಮ್ಮಿಗನೂರು ಡಿವೈಎಸ್‌ಪಿ ಭಾರ್ಗವಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಂತ್ರಾಲಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ : ಟ್ರ‍್ಯಾಕ್ಟರ್ ಪಲ್ಟಿ – ಯುವಕ ಸ್ಥಳದಲ್ಲೇ ಸಾವು!



















