ಕೇರಳಂ : ಕೇರಳಂನ ಕಾಸರಗೋಡು ಜಿಲ್ಲೆಯಾದ್ಯಂತ ವರುಣಾರ್ಭಟ ತೀವ್ರಗೊಂಡಿದೆ. ಧಾರಾಕಾರ ಮಳೆಗೆ ಮಣ್ಣು ಕುಸಿದು ಬಿದ್ದ ಪರಿಣಾಮ ಮಕ್ಕಳಿಬ್ಬರು ದಾರುಣವಾಗಿ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಅಡೂರು ಎಂಬಲ್ಲಿ ನಡೆದಿದೆ. ಮುನ್ಸಿರ್(10) ಮತ್ತು ಮುಜಮ್ಮಿಲ್ (14) ಮೃತ ಮಕ್ಕಳು.
ಮಕ್ಕಳು ತಮ್ಮ ಮನೆಯ ಸಮೀಪ ಆಟವಾಡುತ್ತಿದ್ದಾಗ ನಿರಂತರ ಮಳೆಯಿಂದಾಗಿ ನೆನೆದಿದ್ದ ಆವರಣ ಗೋಡೆಯು ಮಣ್ಣಿನ ಸಮೇತ ಕುಸಿದು ಬಿದ್ದಿದೆ. ಪರಿಣಾಮ ಮೂವರು ಮಕ್ಕಳು ಮಣ್ಣಿನಡಿ ಸಿಲುಕಿಕೊಂಡಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಮತ್ತು ಅಡೂರು ಠಾಣೆಯ ಪೊಲೀಸರು ಯುದ್ಧೋಪಾದಿಯಲ್ಲಿ ಜಂಟಿ ರಕ್ಷಣಾ ಕಾರ್ಯಾಚರಣೆ ನಡೆಸಿದರಾದರೂ, ದುರದೃಷ್ಟವಶಾತ್ ಇಬ್ಬರು ಮಕ್ಕಳು ಅದಾಗಲೇ ಸಾವನ್ನಪ್ಪಿದ್ದು, ಮತ್ತೊಂದು ಮಗುವಿನ ಸ್ಥಿತಿ ಗಂಭೀರವಾಗಿದೆ. ಸದ್ಯ ಘಟನಾ ಸಂಬಂಧ ಅಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ದೇಶದ ಜನತೆಗೆ ಮತ್ತೆ ಶಾಕ್ – ಗೃಹಬಳಕೆ ಸಿಲಿಂಡರ್ ದರ 29 ರೂ. ಏರಿಕೆ



















