ಸ್ಪೇನ್ ದೇಶದಲ್ಲಿ ಭೀಕರ ಬೋಟ್ ದುರಂತ ಸಂಭವಿಸಿದ್ದು, 39ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ. ವಲಸಿಗರಿದ್ದ ಬೋಟ್ ಮುಗುಚಿದ ಪರಿಣಾಮ ಈ ಭೀಕರ ಸಾವು-ನೋವು ಸಂಭವಿಸಿದೆ. ಸೇಂಟ್ ಲೂಯಿಸ್ನಿಂದ ಸ್ಪೇನ್ನ ಕ್ಯಾನರಿ ದ್ವೀಪಗಳತ್ತ ಈ ದೋಣಿ ಸಾಗುತ್ತಿತ್ತು. ಈ ವೇಳೆ ವಲಸಿಗರ ದೋಣಿ ಕಿಬೇನರ್ ಸಮೀಪ ಮುಗುಚಿ ಬಿದ್ದಿದೆ.
ತಾಯ್ನಾಡಿನಲ್ಲಿ ಆರ್ಥಿಕ ಮುಗ್ಗಟ್ಟು ಮತ್ತು ನಿರುದ್ಯೋಗದಿಂದ ಜನರು ತೀವ್ರವಾಗಿ ಒದ್ದಾಡುತ್ತಿದ್ದಾರೆ. ಹೀಗಾಗಿ ಪಶ್ಚಿಮ ಆಫ್ರಿಕಾದಿಂದ ಯುರೋಪ್ ದೇಶಗಳತ್ತ ಜನರು ವಲಸೆ ಹೋಗುತ್ತಿದ್ದಾರೆ. ಯುರೋಪ್ ತಲುಪುವುದಕ್ಕಾಗಿ ವಲಸಿಗರು ಇಂತಹ ಅಪಾಯಕಾರಿ ಹಾದಿಯನ್ನು ಹಿಡಿಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂತಹ ಭೀಕರ ದುರಂತಗಳು ಆಗಾಗ ಬೆಳಕಿಗೆ ಬರುತ್ತಿವೆ.


















