ಹಬ್ಬದ ಸಮಯದಲ್ಲಿ ದೇಶಾದ್ಯಂತ ವಿವಿಧ ಸಿಹಿ ಘಟಕಗಳ ಮೇಲೆ FSSAI ಅಧಿಕಾರಿಗಳು ಭರ್ಜರಿ ದಾಳಿ ನಡೆಸಿದ್ದಾರೆ. ಗ್ರಾಹಕರಿಗೆ ಸುರಕ್ಷಿತ ಆಹಾರ ಒದಗಿಸುವ ದೃಷ್ಟಿಯಿಂದ ಒಟ್ಟು 56,431 ಮಳಿಗೆಗಳ ಮೇಲೆ ಈ ಕಾರ್ಯಾಚರಣೆ ಮಾಡಲಾಗಿದೆ. ಪರಿಶೀಲನೆ ವೇಳೆ 82 ಕೋಟಿ ರೂಪಾಯಿ ಮೌಲ್ಯದ 3,280 ಟನ್ ಕಳಪೆ ಹಾಗೂ ಕಲ್ಬೆರಕೆ ಆಹಾರವನ್ನು ಜಪ್ತಿ ಮಾಡಲಾಗಿದೆ. ಇದರಲ್ಲಿ ಕಳಪೆ ಗುಣಮಟ್ಟದ ಪನ್ನೀರ್, ತುಪ್ಪ ಮತ್ತು ಹಾಲು ಸೇರಿವೆ. ನಿಯಮ ಬಾಹಿರವಾಗಿ ಕಾರ್ಯನಿರ್ವಹಿಸುತ್ತಿದ್ದ ಘಟಕಗಳ ಪೈಕಿ 52 ಪರವಾನಗಿಗಳನ್ನು ರದ್ದುಪಡಿಸಲಾಗಿದ್ದು, 1,133 ಪರವಾನಗಿಗಳನ್ನು ಅಮಾನತು ಮಾಡಲಾಗಿದೆ.
ಇದೇ ವೇಳೆ 314 ಮಳಿಗೆಗಳಿಗೆ ಬೀಗ ಜಡಿಯಲಾಗಿದ್ದು, ನ್ಯೂನತೆಗಳನ್ನು ಸರಿಪಡಿಸಿಕೊಳ್ಳುವಂತೆ 10,477 ಉದ್ಯಮದಾರರಿಗೆ ಸುಧಾರಣಾ ನೋಟೀಸ್ ನೀಡಲಾಗಿದೆ. ಈ ಬೃಹತ್ ಕಾರ್ಯಾಚರಣೆಯು ಸಾರ್ವಜನಿಕರ ಗಮನ ಸೆಳೆದಿದೆ.


















