ಬೆಂಗಳೂರು : ಟಾಲಿವುಡ್ ಸೂಪರ್ ಸ್ಟಾರ್ ಜೂ.ಎನ್‌ಟಿಆರ್– ಪ್ರಶಾಂತ್ ನೀಲ್ ಕಾಂಬಿನೇಷನ್‌ನ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಡ್ರ್ಯಾಗನ್ ಸಿನಿಮಾದ ಗ್ಲಿಂಪ್ಸ್ ಔಟ್ ಆಗಿದೆ. ಜ್ಯೂನಿಯರ್ ಎನ್‌ಟಿಆರ್ ಬರ್ತ್‌ಡೇ ಹಿನ್ನೆಲೆ ಚಿತ್ರತಂಡ ಗ್ಲಿಂಪ್ಸ್ ರಿಲೀಸ್ ಮಾಡಿದೆ. ಮಧ್ಯರಾತ್ರಿ 11.59 ಕ್ಕೆ 4 ನಿಮಿಷ 35 ಸೆಕೆಂಡ್‌ನ ಬಹುದೊಡ್ಡ ಗ್ಲಿಂಪ್ಸ್ ರಿಲೀಸ್ ಆಗಿದ್ದು, ಜೂ.ಎನ್‌ಟಿಆರ್ ಮಾಸ್ ಲುಕ್ ಮತ್ತು ಆ್ಯಕ್ಷನ್ ದೃಶ್ಯಗಳು ಗೂಸ್ ಬಂಪ್ಸ್ ತರಿಸುವಂತಿದೆ. ಹಾಗೆಯೇ ಇದೇ ಜೂನ್ 11 ರಂದು ಸಿನಿಮಾ ರಿಲೀಸ್ ಆಗ್ತಾ ಇರೋದನ್ನ ಚಿತ್ರತಂಡ ಖಚಿತಪಡಿಸಿದೆ.
ಬ್ರಿಟಿಷ್ ಆಳ್ವಿಕೆ, ಆಫ್ಘಾನಿಸ್ತಾನದ ಮಾಫಿಯಾ ಮತ್ತು ಡ್ರಗ್ಸ್ ಕಳ್ಳ ಸಾಗಣೆಯ ಹಿನ್ನೆಲೆ ಇರೋದು ಗ್ಲಿಂಪ್ಸ್‌ನಲ್ಲಿ ಗೊತ್ತಾಗುತ್ತಾ ಇದೆ. ಕೆಜಿಎಫ್, ಸಲಾರ್ ಬಳಿಕ ಪ್ರಶಾಂತ್ ನೀಲ್ ಮತ್ತೊಂದು ದೊಡ್ಡ ಕಥಾಹಂದರವನ್ನ ಅನಾವರಣ ಮಾಡ್ತಾ ಇದ್ದು, ಗ್ಲಿಂಪ್ಸ್ ಉದ್ದಕ್ಕೂ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನ ಹುಟ್ಟುಹಾಕಿದೆ. ಈ ಚಿತ್ರದಲ್ಲಿ ಜ್ಯೂನಿಯರ್ ಎನ್‌ಟಿಆರ್ ಲುಜೆನ್ ಎಂಬ ಅಸ್ಸಾಸಿನ್ ಹಂತಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಚಿತ್ರದಲ್ಲಿ ನಾಯಕಿಯಾಗಿ ರುಕ್ಮಿಣಿ ವಸಂತ್, ವಿಲನ್ ಆಗಿ ಅನಿಲ್ ಕಪೂರ್, ರಘುವೀರ್ ರಾಥೋಡ್ ಮತ್ತು ತೋವಿನೋ ಥಾಮಸ್ ಕಾಣಿಸಿಕೊಂಡಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಈ ಸಿನಿಮಾವನ್ನ ನಿರ್ಮಾಣ ಮಾಡಿದ್ದು, ರವಿ ಬಸ್ರೂರ್ ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.
ಇದನ್ನೂ ಓದಿ : ಜಿಬಿಎ ಚುನಾವಣೆ ಭವಿಷ್ಯ ಇಂದು ನಿರ್ಧಾರ!



















