ನಟ ರಿಷಬ್ ಶೆಟ್ಟಿ ಅವರಿಗೆ ಮತ್ತೊಂದು ಹೆಮ್ಮೆಯ ಗರಿ ಲಭಿಸಿದ್ದು, ಕಾಂತಾರ 1 ಚಿತ್ರದ ನಟನೆಗಾಗಿ 2026ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಫೆಸ್ಟಿವಲ್ ಪ್ರಶಸ್ತಿ ದೊರೆತಿದೆ.ಸಿನಿಮಾ, ಟಿವಿ ಮತ್ತು ಸಂಗೀತ ಕ್ಷೇತ್ರಕ್ಕೆ ನೀಡಲಾಗುವ ಈ ಪ್ರಶಸ್ತಿಗಳಲ್ಲಿ ಕನ್ನಡಕ್ಕೆ ಒಟ್ಟು ಮೂರು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗಳು ಲಭಿಸಿವೆ.
ಕಾಂತಾರ 1 ಚಿತ್ರದ ಸಿನಿಮಾಟೋಗ್ರಾಫಿಗೂ ಪ್ರಶಸ್ತಿ ದಕ್ಕಿದೆ. ಪ್ರಶಸ್ತಿ ಪಟ್ಟಿಯಲ್ಲಿ ಧುರಂಧರ್ ಚಿತ್ರಕ್ಕೆ ಕಾಂತಾರ ಸ್ಪರ್ಧೆ ನೀಡಿದೆ. ಈ ಪ್ರಶಸ್ತಿ ಸಮಾರಂಭದಲ್ಲಿ ಹಾಲಿವುಡ್ ಸೆಲೆಬ್ರಿಟಿಗಳು ಹಾಗೂ ಜೇಮ್ಸ್ ಕ್ಯಾಮರೋನ್ ಅವರಂತಹ ದಿಗ್ಗಜರ ಜೊತೆ ರಿಷಬ್ ಶೆಟ್ಟಿ ವೇದಿಕೆ ಹಂಚಿಕೊಳ್ಳಲಿದ್ದಾರೆ. ಸದ್ಯಕ್ಕೆ ರಿಷಬ್ ಶೆಟ್ಟಿ ಅವರು ಜೈ ಹನುಮಾನ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.














