ಮೈಸೂರು: ನಗರದಲ್ಲಿ ದಸರಾ ಪ್ರಯುಕ್ತ ಆಯೋಜಿಸಿದ್ದ ಆಹಾರ ಮೇಳ ಉದ್ಘಾಟಿಸಿ ಮಾತಾಡಿದ ಸಿಎಂ ಸಿದ್ದರಾಮಯ್ಯನವರು ಬಾನು ಮುಷ್ತಾಕ್ ಅವರು ದಸರಾ ಉದ್ಘಾಟಿಸಿದ್ದನ್ನು ವಿರೋಧಿಸವರು ಬರೀ ದಡ್ಡರಲ್ಲ, ಮೂರ್ಖರು ಎಂದು ಕಿಡಿಕಾರಿದರು.
ಇಂದಿನಿಂದ ದಸರಾ ಮಹೋತ್ಸವಕ್ಕೆ ಚಾಲನೆ ಸಿಕ್ಕಿದ್ದು ಈ ಬಾರಿ ಮೈಸೂರು ದಸರಾವನ್ನು ಬಾನು ಮುಷ್ತಾಕ್ ಅವರು ಉದ್ಘಾಟನೆ ಮಾಡಿದ್ದಾರೆ. ಬಾನು ಮುಷ್ತಾಕ್ ಹಾಸನ ಜಿಲ್ಲೆಯವರು, ಮುಸಲ್ಮಾನ್ ಜನಾಂಗಕ್ಕೆ ಸೇರಿದ್ದರೂ ಕೂಡ ಅವರು ಕನ್ನಡದ ಲೇಖಕಿ. ಬಾನು ಮುಷ್ತಾಕ್ ಅವರನ್ನು ಧೀಮಂತ ಮಹಿಳೆ ಎಂದರೆ ತಪ್ಪಿಲ್ಲ. ದಸರಾ ಒಂದು ನಾಡ ಹಬ್ಬ ಇದರಲ್ಲಿ ಯಾವುದೇ ಬೇಧ ಭಾವ ಇಲ್ಲ, ದಸರಾ ಯಾವುದೇ ಧರ್ಮದ ಆಧಾರದಲ್ಲಿ ಮಾಡುವ ಹಬ್ಬನಾ ಎಂದು ಪ್ರಶ್ನಿಸಿದರು. ಆದರೂ ಕೂಡ ಇದಕ್ಕೆ ಕೆಲವರು ವಿರೋಧವನ್ನು ವ್ಯಕ್ತಪಡಿಸಿದರು. ಇಂತಹವರು ಬರೀ ದಡ್ಡರಲ್ಲ ಮೂರ್ಖರು ಎಂದು ವಿರೋಧಿಗಳ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಪ್ರತಾಪ್ ಸಿಂಹ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ
ಬಾನು ಮುಷ್ತಾಕ್ ದಸರಾ ಉದ್ಘಾಟಿಸೋದನ್ನು ವಿರೋಧಿಸಿ ಕೆಲವರು ಸುಪ್ರೀಂಕೋರ್ಟ್‌ಗೂ ಕೂಡ ಹೋಗಿದ್ದರು. ಅರ್ಜಿದಾರರಿಗೆ ಕೋರ್ಟ್ ಮೊದಲು ಸಂವಿಧಾನದ ಪೀಠಿಕೆ ಓದಿ ಎಂದು ಹೇಳಿ ಕಳುಹಿಸಿದೆ. ಎರಡು ಬಾರಿ ಎಂಪಿ ಆದವರಿಗೆ ನಾಚಿಕೆಯಾಗಬೇಕೆಂದು ಪ್ರತಾಪ್ ಸಿಂಹ ವಿರುದ್ಧ ಸಿಎಂ ಹರಿಹಾಯ್ದಿದ್ದಾರೆ. ಸಿದ್ದರಾಮಯ್ಯ ಹಿಂದೂ ವಿರೋಧಿ ಎಂದು ಹೇಳುತ್ತಾರೆ. ಆದರೆ ನನ್ನ ಹೆಸರಿನಲ್ಲ ಎರಡು ದೇವರ ಹೆಸರಿದೆ ಸಿದ್ದ ಅಂದರೆ ಈಶ್ವರ ರಾಮ ಅಂದರೆ ವಿಷ್ಟು ಎಂದರ್ಥ. ನಾನು ಪ್ರತಾಪ್ ಸಿಂಹನಿಗಿಂತ ಅಪ್ಪಟವಾದ ಹಿಂದೂ. ನಾನು ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟಿದ್ದೇನೆಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.



















