ಉಡುಪಿ : ಸಿನೆಮಾ ರಂಗದಲ್ಲಿ ಡಿವೈನ್ ಹಿಟ್ ಕಂಡ ಕಾಂತಾರ ಚಿತ್ರದಲ್ಲಿ ಬರುವ ಕಂಬಳದ ದೃಶ್ಯದಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿಯೊಂದಿಗೆ ತೆರೆಯಲ್ಲಿ ಮಿಂಚಿದ್ದ ʼಅಪ್ಪು ಎಂಬ ಕೋಣ ಅಸುನೀಗಿದೆ.
ಬೈಂದೂರು ಬೊಳಂಬಳ್ಳಿಯ ಕಂಬಳ ಪ್ರೇಮಿ ಪರಮೇಶ್ವರ ಭಟ್ ಅವರ ಕೋಣ ಇದಾಗಿದೆ. ಕಾಂತಾರಾ ಚಿತ್ರೀಕರಣಕ್ಕೂ ಮೊದಲಿನಿಂದಲೇ ಈ ಅಪ್ಪು ಮತ್ತು ಕಾಲಾ ಎನ್ನುವ ಕೋಣಗಳ ಮೂಲಕ ತರಬೇತಿ ನೀಡುತ್ತಿದ್ದರು.
ಕಂಬಳದ ʼನೇಗಿಲು ಜೂನಿಯರ್ ವಿಭಾಗʼದಲ್ಲಿ ಎರಡು ಬಾರಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಕೋಣ 5 ವರ್ಷ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ʼಅಪ್ಪುʼ ಎಂಬ ಕೋಣ ಅಸುನೀಗಿದ ಹಿನ್ನಲೆಯಲ್ಲಿ ಕಂಬಳ ಪ್ರಿಯರು ಹಾಗೂ ಕಾಂತಾರಾ ಚಿತ್ರತಂಡದ ಸದಸ್ಯರು ಬೇಸರ ವ್ಯಕ್ತಪಡಿಸಿದ್ದಾರೆ.



















