ಗದಗ : ತಡರಾತ್ರಿ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಇಬ್ಬರು ಸಾವನಪ್ಪಿದ್ದು, ಹಲವರಿಗೆ ಗಾಯವಾಗಿರುವ ಘಟನೆ ಗದಗ ತಾಲೂಕಿನ ಹರ್ತಿ ಗ್ರಾಮದ ಬಳಿ ನಡೆದಿದೆ. ಗದಗ ತಾಲೂಕಿನ ಹಿರೇಕೊಪ್ಪ ಗ್ರಾಮದ ನಿವಾಸಿಗಳಾದ ನಿಂಗಪ್ಪ ಯಳವತ್ತಿ (36), ಮುತ್ತಪ್ಪ ಸತ್ತಿಗೇರಿ (35) ಮೃತ ದುರ್ದೈವಿಗಳು.
ಟಾಟಾ ಎಸಿ ವಾಹನದಲ್ಲಿ ಗೊಜುನೂರು ಗ್ರಾಮದಲ್ಲಿ ಆರ್ಕೆಸ್ಟ್ರಾ ನೋಡಲು ತೆರಳಿದ್ದರು. ವಾಪಸ್ ಬರುವಾಗ ನಿದ್ದೆ ಪಂಪರನಲ್ಲಿ ಈ ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಈ ದುರ್ಘಟನೆಯಲ್ಲಿ ಎಂಟು ಜನ್ರಿಗೆ ಗಾಯವಾಗಿದ್ದು, ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ
ಸದ್ಯ ಘಟನ ಸ್ಥಳಕ್ಕೆ ಗದಗ ಗ್ರಾಮೀಣ ಪೊಲೀಸರು ಭೇಟಿ ಪರಿಶೀಲನೆ ಮಾಡಿದ್ದಾರೆ. ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ : ಬಿಹಾರ ರಾಜಕೀಯದಲ್ಲಿ ಸಂಚಲನ | ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ.. ರಾಜ್ಯಸಭೆಗೆ ಲಗ್ಗೆ!



















