ಹಾಲು ಮತ್ತು ಮೊಸರಿನ ದರ ಹೆಚ್ಚಳ ಅನಿವಾರ್ಯ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಗದಗನಲ್ಲಿ ಹೇಳಿದ್ದಾರೆ. ದರ ಹೆಚ್ಚಳದಿಂದ ಜನರಿಗೆ ಹೊರೆಯಾಗುವುದನ್ನು ಒಪ್ಪಿಕೊಂಡ ಸಚಿವರು, ಹೆಚ್ಚಳ ಮಾಡಿದ ಹಣವನ್ನು ಸರ್ಕಾರ ಪಡೆದುಕೊಳ್ಳದೆ ರೈತರಿಗೆ ನೀಡುತ್ತಿದೆ ಹಾಗೂ ಸ್ವಲ್ಪ ಭಾಗ ಕೆಎಂಎಫ್‌ಗೆ ನೀಡಲಾಗುತ್ತಿದೆ ಎಂದಿದ್ದಾರೆ.
ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಹಾಲಿನ ದರ ಕಡಿಮೆಯಿದ್ದು, ರೈತರಿಗೆ ಅನುಕೂಲ ಮಾಡುವ ದೃಷ್ಟಿಯಿಂದ ಈ ಏರಿಕೆ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಇದೇ ವೇಳೆ ಹಾಸನಾಂಬ ದೇವಿ ದರ್ಶನ ಪಡೆದ ಚಿನ್ನ ಕಳ್ಳಸಾಗಾಟ ಆರೋಪಿ ನಟಿ ರನ್ಯಾ ರಾವ್ ವಿಚಾರವಾಗಿ ಪ್ರತಿಕ್ರಿಯಿಸಿ, ಅವರಿಗೆ ವಿಐಪಿ ದರ್ಶನ ನೀಡಿದ್ದು ತಪ್ಪು ಎಂದಿದ್ದಾರೆ. ಅಲ್ಲದೆ ದೇಶದಲ್ಲಿ ಎಸ್‌ಐಆರ್ ಪ್ರಕ್ರಿಯೆ ನಡೆಸಿರುವ ರೀತಿ ಸರಿಯಿಲ್ಲ ಎಂದು ಸಚಿವ ರಾಯರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.


















