ನವೆಂಬರ್ 12ರಂದು ಮೈಕ್ರೋಸಾಫ್ಟ್ ಮತ್ತು ಔಟ್ಲುಕ್ ಸೇವೆಯಲ್ಲಿ ಉಂಟಾಗಿದ್ದ ಅಡಚಣೆಯ ನಂತರ, ಈಗ ಅಮೆರಿಕ ಸೇರಿದಂತೆ ಜಗತ್ತಿನಾದ್ಯಂತ ಆಪಲ್ ಸೇವೆಯಲ್ಲಿ ವ್ಯತ್ಯಯವಾಗಿದೆ. ಐಕ್ಲೌಡ್ ಸೈನ್-ಇನ್, ಆಪ್ ಸ್ಟೋರ್, ಆಪಲ್ ಮ್ಯೂಸಿಕ್, ಆಪಲ್ ಪೇ ಮತ್ತು ಆಪಲ್ ಕೇರ್ ಸೇವೆಗಳಲ್ಲಿ ತೊಂದರೆ ಕಾಣಿಸಿಕೊಂಡಿದ್ದು, ಸಾಫ್ಟ್ವೇರ್ ಅಪ್ಡೇಟ್ನಿಂದ ಈ ಸಮಸ್ಯೆಯಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಇದರ ಬಿಸಿ ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆ ಎನ್ಎಸ್ಎಗೂ ತಟ್ಟಿದ್ದು, ರಹಸ್ಯ ಮಾಹಿತಿ ವಿನಿಮಯಕ್ಕೆ ಬಳಸುವ ಎನ್ಎಸ್ಎ ಆಂತರಿಕ ನೆಟ್ವರ್ಕ್ ತಾತ್ಕಾಲಿಕವಾಗಿ ಆಫ್ ಆಗಿದೆ. ಅಮೆರಿಕದ ಇತರ ಪ್ರಮುಖ ವಲಯಗಳಲ್ಲೂ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಇದು ಕೇವಲ ತಾಂತ್ರಿಕ ಅಡಚಣೆಯೇ ಹೊರತು ಸೈಬರ್ ದಾಳಿಯಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ.


















