ಅಮೆರಿಕದಲ್ಲಿ 10 ಸಾವಿರಕ್ಕೂ ಹೆಚ್ಚು ವಿಮಾನಗಳ ಹಾರಾಟ ವಿಳಂಬವಾಗಿದೆ. ಈ ಹಿನ್ನೆಲೆಯಲ್ಲಿ 1,200ಕ್ಕೂ ಹೆಚ್ಚು ವಿಮಾನಗಳ ಹಾರಾಟ ಸ್ಥಗಿತಗೊಂಡಿದೆ.
ಸುರಕ್ಷತಾ ಕಾರಣ ಹಾಗೂ ಸಂವಹನ ವ್ಯವಸ್ಥೆಯ ತಾಂತ್ರಿಕ ದೋಷ ಉಂಟಾದ ಕಾರಣ ಈ ಅವಘಡ ಸಂಭವಿಸಿದೆ. ಅಲ್ಲಿನ 22 ಪ್ರಾದೇಶಿಕ ಎಟಿಸಿ ಮೇಲೆ ದೂರಸಂಪರ್ಕ ವ್ಯತ್ಯಯವಾಗಿದೆ. ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ನಿರ್ದೇಶನ ನೀಡಿದೆ. 7 ಗಂಟೆಗೂ ಹೆಚ್ಚು ಕಾಲ ವಿಮಾನ ಸೇವೆಯಲ್ಲಿ ವ್ಯತ್ಯಯವಾಗಿದೆ. 9/11ರ ದಾಳಿ ಬಳಿಕ ಈ ರೀತಿಯ ವ್ಯತ್ಯಯ ಮೂರನೇ ಬಾರಿಗೆ ಸಂಭವಿಸಿದೆ.



















