ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ಕ್ರೀಡೆ

ಗಾಲೆ ಟೆಸ್ಟ್‌ನಲ್ಲಿ ‘ಸೂಪರ್‌ಮ್ಯಾನ್’ ಆದ ಗಿಲ್ : ಒಂಟಿ ಕೈಯಲ್ಲಿ ಹಿಡಿದ ಅದ್ಭುತ ಕ್ಯಾಚ್‌ಗೆ ಕ್ರಿಕೆಟ್ ಜಗತ್ತು ಫಿದಾ!

August 18, 2026
Share on WhatsappShare on FacebookShare on Twitter

ಬೆಂಗಳೂರು : ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವ ನಾಯಕ ಶುಭ್‍ಮನ್ ಗಿಲ್ ತಮ್ಮ ಚುರುಕಾದ ಫೀಲ್ಡಿಂಗ್ ಮೂಲಕ ಕ್ರಿಕೆಟ್ ಅಭಿಮಾನಿಗಳನ್ನು ಬೆರಗುಗೊಳಿಸಿದ್ದಾರೆ. ಗಾಲೆಯ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನದಾಟದಲ್ಲಿ ಗಿಲ್ ಹಿಡಿದ ಕಣ್ಣುಕೋರೈಸುವ ಒಂಟಿ ಕೈಯ ಕ್ಯಾಚ್ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ. ಈ ಅದ್ಭುತ ಕ್ಯಾಚ್‌ನ ವಿಡಿಯೋ ಇದೀಗ ಕ್ರೀಡಾ ವಲಯದಲ್ಲಿ ಭಾರಿ ವೈರಲ್ ಆಗಿದ್ದು, ಮಾಜಿ ಕ್ರಿಕೆಟಿಗರು ಹಾಗೂ ದಿಗ್ಗಜರು ಗಿಲ್ ಅವರ ಫಿಟ್ನೆಸ್ ಹಾಗೂ ಚುರುಕುತನವನ್ನು ಕೊಂಡಾಡುತ್ತಿದ್ದಾರೆ.

Left hand, full stretch, absolute stunner from Shubman Gill! 🥵

Watch #SLvIND, 1st Test, LIVE NOW on Sony Sports Network TV channels & Sony LIV.#SonySportsNetwork #SonyLIV #BeautifulGameOfTestCricket pic.twitter.com/xe2ldGxkpJ

— Sony Sports Network (@SonySportsNetwk) August 17, 2026

ಲಂಕಾ ಇನ್ನಿಂಗ್ಸ್‌ನ ವೇಳೆ ಸ್ಪಿನ್ನರ್ ಕುಲದೀಪ್ ಯಾದವ್ ಅವರ ಎಸೆತವನ್ನು ಎದುರಿಸಿದ ಕಮಿಂದು ಮೆಂಡಿಸ್, ಚೆಂಡನ್ನು ಕವರ್ಸ್ ಕಡೆಗೆ ಬಾರಿಸುವ ಸಾಹಸಕ್ಕೆ ಕೈಹಾಕಿದರು. ಕ್ರೀಸ್‌ನಿಂದ ಕೊಂಚ ಮುಂದೆ ಬಂದು ಆಡಿದ ಮೆಂಡಿಸ್ ಲೆಕ್ಕಾಚಾರ ಸಂಪೂರ್ಣವಾಗಿ ತಪ್ಪಿತ್ತು. ಚೆಂಡು ಗಾಳಿಯಲ್ಲಿ ಶಾರ್ಟ್ ಎಕ್ಸ್‌ಟ್ರಾ ಕವರ್‌ ಕಡೆಗೆ ವೇಗವಾಗಿ ಹಾರಿಬಂತು. ಈ ವೇಳೆ ಅಲ್ಲೇ ಫೀಲ್ಡಿಂಗ್ ಮಾಡುತ್ತಿದ್ದ ನಾಯಕ ಶುಭ್‍ಮನ್ ಗಿಲ್, ತಮ್ಮ ಎಡಭಾಗಕ್ಕೆ ಗಾಳಿಯಲ್ಲಿ ಸಂಪೂರ್ಣವಾಗಿ ಡೈವ್ ಹೊಡೆದು ಕೇವಲ ಒಂಟಿ ಕೈಯಲ್ಲಿ ಚೆಂಡನ್ನು ಲಪಟಾಯಿಸಿದರು. ಚೆಂಡು ನೆಲಕ್ಕುರುಳುವ ಕೇವಲ ಕೆಲವೇ ಇಂಚುಗಳ ಅಂತರದಲ್ಲಿ ಗಿಲ್ ತಮ್ಮ ಎಡಗೈಯನ್ನು ಚಾಚಿ ಅತ್ಯಂತ ಸುರಕ್ಷಿತವಾಗಿ ಕ್ಯಾಚ್ ಹಿಡಿದರು. ಕ್ಯಾಚ್ ಹಿಡಿದ ತಕ್ಷಣವೇ ಸಂಭ್ರಮದಿಂದ ಎದ್ದು ನಿಂತ ಗಿಲ್, ಚೆಂಡನ್ನು ಗಾಳಿಯಲ್ಲಿ ತೂರಿ ತಮ್ಮ ಆನಂದವನ್ನು ವ್ಯಕ್ತಪಡಿಸಿದರು. ಭಾರತದ ಸಹ ಆಟಗಾರರು ಕೂಡ ಅಷ್ಟೇ ವೇಗವಾಗಿ ಓಡಿಬಂದು ನಾಯಕನ ಈ ಅದ್ಭುತ ಕ್ಯಾಚ್ ಅನ್ನು ಸಂಭ್ರಮಿಸಿದರು.

ಕುಲದೀಪ್ ಯಾದವ್ ಸ್ಪಿನ್ ಮೋಡಿ, ಸಂಕಷ್ಟಕ್ಕೆ ಸಿಲುಕಿದ ಲಂಕಾ

ಭಾರತದ ಬೃಹತ್ ಮೊತ್ತವನ್ನು ಬೆನ್ನಟ್ಟುವ ಒತ್ತಡದಲ್ಲಿದ್ದ ಶ್ರೀಲಂಕಾ ತಂಡಕ್ಕೆ ಭಾರತೀಯ ಸ್ಪಿನ್ನರ್‌ಗಳು ಆರಂಭಿಕ ಆಘಾತ ನೀಡುವಲ್ಲಿ ಯಶಸ್ವಿಯಾದರು. ಕಮಿಂದು ಮೆಂಡಿಸ್ 25 ಎಸೆತಗಳಲ್ಲಿ ೧೪ ರನ್ ಗಳಿಸಿ ಕ್ರೀಸ್ ಕಚ್ಚಿ ನಿಲ್ಲುವ ಮುನ್ಸೂಚನೆ ನೀಡಿದ್ದರು. ಆದರೆ ಕುಲದೀಪ್ ಯಾದವ್ ಅವರ ಸ್ಪಿನ್ ಮೋಡಿಯೆದುರು ಹಾಗೂ ಗಿಲ್ ಅವರ ಅಸಾಮಾನ್ಯ ಚುರುಕುತನದ ಮುಂದೆ ಅವರ ಆಟ ನಡೆಯಲಿಲ್ಲ. ಮೆಂಡಿಸ್ ವಿಕೆಟ್ ಪತನದೊಂದಿಗೆ ಲಂಕಾ ತಂಡ ಕೇವಲ 59 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು. ಕುಲದೀಪ್ ಯಾದವ್, ರವೀಂದ್ರ ಜಡೇಜಾ ಹಾಗೂ ಮಾನವ್ ಸುತಾರ್ ಅವರ ಸ್ಪಿನ್ ದಾಳಿಗೆ ತತ್ತರಿಸಿದ ಆತಿಥೇಯರು ಮೊದಲ ಸೆಷನ್ ಮುಕ್ತಾಯದ ವೇಳೆಗೆ ಕೇವಲ 99 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಪರದಾಡಿದರು.

ದಿಗ್ಗಜರಿಂದಲೂ ಗಿಲ್ ಚುರುಕುತನಕ್ಕೆ ಭಾರೀ ಮೆಚ್ಚುಗೆ

ಶುಭ್‍ಮನ್ ಗಿಲ್ ಅವರ ಈ ಸ್ಟನ್ನಿಂಗ್ ಕ್ಯಾಚ್ ಕೇವಲ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರನ್ನು ಮಾತ್ರವಲ್ಲ, ಟಿವಿ ಪರದೆ ಮುಂದೆ ಕುಳಿತಿದ್ದ ದಿಗ್ಗಜ ಕಾಮೆಂಟೇಟರ್‌ಗಳನ್ನು ಬೆರಗುಗೊಳಿಸಿದೆ. ವೆಸ್ಟ್ ಇಂಡೀಸ್‌ನ ದಂತಕಥೆ ಇಯಾನ್ ಬಿಷಪ್ ಅವರು ಗಿಲ್ ಕ್ಯಾಚ್‌ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. “ಶುಭ್‍ಮನ್ ಗಿಲ್ ಹಿಡಿದ ಆ ಕ್ಯಾಚ್… ನಿಜಕ್ಕೂ ಅದ್ಭುತ” ಎಂದು ಅವರು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಗಿಲ್ ಅವರನ್ನು “ಪ್ರಸ್ತುತ ಅಂತರಾಷ್ಟ್ರೀಯ ಕ್ರಿಕೆಟ್‌ನ ಅತ್ಯುತ್ತಮ ಫೀಲ್ಡರ್” ಎಂದು ಹಾಡಿ ಹೊಗಳುತ್ತಿದ್ದಾರೆ.

ಭಾರತದ ಬೃಹತ್ ಮೊತ್ತ, ಪಂದ್ಯದ ಮೇಲೆ ಬಿಗಿ ಹಿಡಿತ

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಭಾರತ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 462 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಯುವ ಆಟಗಾರ ದೇವದತ್ ಪಡಿಕ್ಕಲ್ ಅವರ ಚೊಚ್ಚಲ ಹಾಗೂ ಆಕರ್ಷಕ 168 ರನ್‌ಗಳ ಶತಕ, ಕೆ.ಎಲ್. ರಾಹುಲ್ ಅವರ ರನ್ ಹಾಗೂ ವಿಕೆಟ್ ಕೀಪರ್ ಧ್ರುವ್ ಜುರೆಲ್ ಅವರ ಸಮಯೋಚಿತ 51 ರನ್‌ಗಳ ನೆರವಿನಿಂದ ಭಾರತ ಲಂಕಾ ಬೌಲರ್‌ಗಳನ್ನು ಕಾಡಿತ್ತು. ಬ್ಯಾಟಿಂಗ್‌ನಲ್ಲಿ ಸಾಧಾರಣ ಪ್ರದರ್ಶನ ನೀಡಿದ್ದ ಗಿಲ್, ಫೀಲ್ಡಿಂಗ್ ಹಾಗೂ ತಮ್ಮ ಆಕ್ರಮಣಕಾರಿ ನಾಯಕತ್ವದಲ್ಲಿ ತಂಡವನ್ನು ಮುಂಚೂಣಿಯಿಂದ ಮುನ್ನಡೆಸುವ ಮೂಲಕ ಗಮನ ಸೆಳೆದಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಪ್ರಾಬಲ್ಯ ಮೆರೆದಿರುವ ಟೀಮ್ ಇಂಡಿಯಾ ಗಾಲೆ ಟೆಸ್ಟ್ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದೆ.

ಇದನ್ನೂ ಓದಿ : ಕಪಿಲ್ ದೇವ್ ಬಳಿಕ 4000 ರನ್, 350 ವಿಕೆಟ್ ಕಬಳಿಸಿದ ವಿಶಿಷ್ಟ ಕ್ಲಬ್ ಸೇರಿದ ಜಡೇಜಾ

Tags: Amazing CatchCricket Highlightscricket worldGalle TestGalle Test MatchGill FieldingIndia Test CricketIndian Cricket NewsKarnataka News beatKNBOne Handed CatchShubman GillShubman Gill CatchSuperman GillTeam IndiaTest Cricket News
SendShareTweet
Previous Post

ತಂದೆ-ಮಗನ ಅನುಮಾನಾಸ್ಪದ ಸಾವಿಗೆ ಬಿಗ್‌ ಟ್ವಿಸ್ಟ್‌ ; ಲವ್ವರ್ ಜೊತೆ ಸೇರಿ ಪತಿ-ಪುತ್ರನನ್ನೇ ಮುಗಿಸಿದ ಪಾಪಿ ಪತ್ನಿ!

Next Post

ಜೀಪ್ 85ನೇ ವಾರ್ಷಿಕೋತ್ಸವ : ಭಾರತದಲ್ಲಿ ಕೇವಲ 85 ಗ್ರಾಹಕರಿಗೆ ಸಿಗಲಿದೆ ‘ಕಾಂಪಾಸ್’ನ ಈ ಸ್ಪೆಷಲ್ ಎಡಿಷನ್ SUV!

Related Posts

ಪಾಕಿಸ್ತಾನಕ್ಕೆ 55 ರನ್‌ಗಳ ಶಾಕ್‌; ಭಾರತದ ಬೌಲರ್‌ಗಳ ಅಬ್ಬರಕ್ಕೆ ಹರ್ಮನ್‌ಪ್ರೀತ್ ಕೌರ್ ಫಿದಾ!
ಕ್ರೀಡೆ

ಪಾಕಿಸ್ತಾನಕ್ಕೆ 55 ರನ್‌ಗಳ ಶಾಕ್‌; ಭಾರತದ ಬೌಲರ್‌ಗಳ ಅಬ್ಬರಕ್ಕೆ ಹರ್ಮನ್‌ಪ್ರೀತ್ ಕೌರ್ ಫಿದಾ!

‘ಕೊಹ್ಲಿ ನಾಯಕನಾದ ಬಳಿಕ ಎಲ್ಲವೂ ಬದಲಾಯಿತು’… ನಿವೃತ್ತಿಯ ಹಿಂದಿನ ಅಸಲಿ ಕಾರಣ ಬಿಚ್ಚಿಟ್ಟ ಸುರೇಶ್ ರೈನಾ!
ಕ್ರೀಡೆ

‘ಕೊಹ್ಲಿ ನಾಯಕನಾದ ಬಳಿಕ ಎಲ್ಲವೂ ಬದಲಾಯಿತು’… ನಿವೃತ್ತಿಯ ಹಿಂದಿನ ಅಸಲಿ ಕಾರಣ ಬಿಚ್ಚಿಟ್ಟ ಸುರೇಶ್ ರೈನಾ!

‘ಮೊಬೈಲ್ ಆಟಗಳಿಂದಲೂ ಈ ಪಂದ್ಯ ತೆಗೆಯಬೇಕು!’: ಭಾರತ–ಪಾಕ್ ಕದನದ ಬಗ್ಗೆ ಬದ್ರಿನಾಥ್ ವ್ಯಂಗ್ಯ
ಕ್ರೀಡೆ

‘ಮೊಬೈಲ್ ಆಟಗಳಿಂದಲೂ ಈ ಪಂದ್ಯ ತೆಗೆಯಬೇಕು!’: ಭಾರತ–ಪಾಕ್ ಕದನದ ಬಗ್ಗೆ ಬದ್ರಿನಾಥ್ ವ್ಯಂಗ್ಯ

ಶಫಾಲಿ ವರ್ಮಾ ಹೊಸ ಇತಿಹಾಸ: ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 3,000 ರನ್, ಅತಿ ಕಿರಿಯ ಹಾಗೂ ವೇಗದ ಆಟಗಾರ್ತಿ!
ಕ್ರೀಡೆ

ಶಫಾಲಿ ವರ್ಮಾ ಹೊಸ ಇತಿಹಾಸ: ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 3,000 ರನ್, ಅತಿ ಕಿರಿಯ ಹಾಗೂ ವೇಗದ ಆಟಗಾರ್ತಿ!

ಶಫಾಲಿಗೆ ಫಾತಿಮಾ ಸನಾ ಸೆಂಡ್‌ಆಫ್; ಭಾರತ–ಪಾಕ್ ಕದನದಲ್ಲಿ ಹೊಸ ವಿವಾದ
ಕ್ರೀಡೆ

ಶಫಾಲಿಗೆ ಫಾತಿಮಾ ಸನಾ ಸೆಂಡ್‌ಆಫ್; ಭಾರತ–ಪಾಕ್ ಕದನದಲ್ಲಿ ಹೊಸ ವಿವಾದ

ಜಾನಿ ಬೈರ್‌ಸ್ಟೋ ಎಸೆದ ಚೆಂಡು ಸಹ ಆಟಗಾರನಿಗೇ ಬಿತ್ತು; ನೋವಿನಿಂದ ನೆಲಕ್ಕುರುಳಿದ ಫೀಲ್ಡರ್, ವಿಡಿಯೊ ವೈರಲ್
ಕ್ರೀಡೆ

ಜಾನಿ ಬೈರ್‌ಸ್ಟೋ ಎಸೆದ ಚೆಂಡು ಸಹ ಆಟಗಾರನಿಗೇ ಬಿತ್ತು; ನೋವಿನಿಂದ ನೆಲಕ್ಕುರುಳಿದ ಫೀಲ್ಡರ್, ವಿಡಿಯೊ ವೈರಲ್

Next Post
ಜೀಪ್ 85ನೇ ವಾರ್ಷಿಕೋತ್ಸವ : ಭಾರತದಲ್ಲಿ ಕೇವಲ 85 ಗ್ರಾಹಕರಿಗೆ ಸಿಗಲಿದೆ ‘ಕಾಂಪಾಸ್’ನ ಈ ಸ್ಪೆಷಲ್ ಎಡಿಷನ್ SUV!

ಜೀಪ್ 85ನೇ ವಾರ್ಷಿಕೋತ್ಸವ : ಭಾರತದಲ್ಲಿ ಕೇವಲ 85 ಗ್ರಾಹಕರಿಗೆ ಸಿಗಲಿದೆ 'ಕಾಂಪಾಸ್'ನ ಈ ಸ್ಪೆಷಲ್ ಎಡಿಷನ್ SUV!

  • Trending
  • Comments
  • Latest
ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!

ಭಾರತದಲ್ಲಿ ಬಿಡುಗಡೆಯಾಯ್ತು ಹೈಯರ್ Mini LED M70 ಸರಣಿ : ಬೆಲೆ ಹಾಗೂ ವೈಶಿಷ್ಟ್ಯಗಳ ವಿವರ

ಭಾರತದಲ್ಲಿ ಬಿಡುಗಡೆಯಾಯ್ತು ಹೈಯರ್ Mini LED M70 ಸರಣಿ : ಬೆಲೆ ಹಾಗೂ ವೈಶಿಷ್ಟ್ಯಗಳ ವಿವರ

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

ಸಾಲಗಾರರಿಗೆ ಗುಡ್ ನ್ಯೂಸ್ : ವಸೂಲಾತಿ ನಿಯಮ ಬಿಗಿಗೊಳಿಸಿದ RBI..ಇಲ್ಲಿದೆ ಡಿಟೇಲ್ಸ್

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ದೆಹಲಿ ಕಟ್ಟಡ ದುರಂತಕ್ಕೆ ನೆಲಮಹಡಿಯಲ್ಲಿ ನಡೆಯುತ್ತಿದ್ದ ಕಾಮಗಾರಿಯೇ ಕಾರಣ!

ದೆಹಲಿ ಕಟ್ಟಡ ದುರಂತಕ್ಕೆ ನೆಲಮಹಡಿಯಲ್ಲಿ ನಡೆಯುತ್ತಿದ್ದ ಕಾಮಗಾರಿಯೇ ಕಾರಣ!

ಪೊಲೀಸ್ ಠಾಣೆ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಅಪ್ಪ-ಮಗ!

ಪೊಲೀಸ್ ಠಾಣೆ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಅಪ್ಪ-ಮಗ!

“ರಾಜ್ಯದ ಮೂಲೆ ಮೂಲೆಯಲ್ಲಿ ತಿರಂಗಾ ಯಾತ್ರೆ ಮಾಡ್ತೀವಿ” ; ಪ್ರಿಯಾಂಕ್ ಖರ್ಗೆಗೆ ಸೂಲಿಬೆಲೆ ಸವಾಲ್!

“ರಾಜ್ಯದ ಮೂಲೆ ಮೂಲೆಯಲ್ಲಿ ತಿರಂಗಾ ಯಾತ್ರೆ ಮಾಡ್ತೀವಿ” ; ಪ್ರಿಯಾಂಕ್ ಖರ್ಗೆಗೆ ಸೂಲಿಬೆಲೆ ಸವಾಲ್!

ಬೀಗರ ಔತಣ ಮುಗಿಸಿ ವಾಪಸ್ ಬರುತ್ತಿದ್ದ ಟೆಂಪೋ ಪಲ್ಟಿ ; 13ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ!

ಬೀಗರ ಔತಣ ಮುಗಿಸಿ ವಾಪಸ್ ಬರುತ್ತಿದ್ದ ಟೆಂಪೋ ಪಲ್ಟಿ ; 13ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ!

Recent News

ಕರ್ನಾಟಕ ನ್ಯೂಸ್ ಬೀಟ್

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ದೆಹಲಿ ಕಟ್ಟಡ ದುರಂತಕ್ಕೆ ನೆಲಮಹಡಿಯಲ್ಲಿ ನಡೆಯುತ್ತಿದ್ದ ಕಾಮಗಾರಿಯೇ ಕಾರಣ!

ದೆಹಲಿ ಕಟ್ಟಡ ದುರಂತಕ್ಕೆ ನೆಲಮಹಡಿಯಲ್ಲಿ ನಡೆಯುತ್ತಿದ್ದ ಕಾಮಗಾರಿಯೇ ಕಾರಣ!

ಪೊಲೀಸ್ ಠಾಣೆ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಅಪ್ಪ-ಮಗ!

ಪೊಲೀಸ್ ಠಾಣೆ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಅಪ್ಪ-ಮಗ!

  • About
  • Advertise
  • Privacy & Policy
  • Contact Us

© 2025 News beat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 News beat