ಐಪಿಎಲ್ನಿಂದ ನಿವೃತ್ತಿಯಾದ ಬೆನ್ನಲ್ಲೇ ಎಂ.ಎಸ್. ಧೋನಿ ಮೈದಾನಕ್ಕೆ ವಿದಾಯ ಹೇಳಿ ಚಿತ್ರರಂಗದತ್ತ ಆಕರ್ಷಿತರಾಗಿದ್ದಾರೆ. ಪತ್ನಿ ಸಾಕ್ಷಿ ಜೊತೆಗೂಡಿ ಸಿನಿಮಾ ನಿರ್ಮಾಣಕ್ಕೆ ಇಳಿದಿರುವ ಧೋನಿ, 2023ರಲ್ಲಿ ಲೆಟ್ಸ್ ಗೆಟ್ ಮ್ಯಾರೀಡ್ ಚಿತ್ರವನ್ನು ನಿರ್ಮಿಸಿದ್ದರು. ಈಗ ತಮ್ಮ ಎರಡನೇ ಚಿತ್ರಕ್ಕೆ ಪ್ಲಾನಿಂಗ್ ನಡೆಸುತ್ತಿದ್ದು, ತಮ್ಮ ಕ್ರಿಕೆಟ್ ಅನುಭವವನ್ನೇ ಕಥೆ ಮಾಡಲಿದ್ದಾರಾ ಎಂಬ ಚರ್ಚೆ ತೆರೆಮರೆಯಲ್ಲಿ ನಡೆಯುತ್ತಿದೆ.
ಸದ್ಯಕ್ಕೆ ಜಾಹೀರಾತುಗಳಲ್ಲಿ ಆಕ್ಟಿವ್ ಆಗಿರುವ ಧೋನಿ ಮತ್ತೆ ಪ್ರೊಡಕ್ಷನ್ನತ್ತ ಮನಸ್ಸು ಮಾಡಿದ್ದಾರೆ. ಈ ಹಿಂದೆ 2016ರಲ್ಲಿ ದಿವಂಗತ ಸುಶಾಂತ್ ಸಿಂಗ್ ರಜಪೂತ್ ಮುಖ್ಯಭೂಮಿಕೆಯಲ್ಲಿ ಎಂ.ಎಸ್. ಧೋನಿ ಬಯೋಪಿಕ್ ಬಿಡುಗಡೆಯಾಗಿ ಬ್ಲಾಕ್ ಬಾಸ್ಟರ್ ಆಗಿತ್ತು.


















