ಬೀದರ್ : ಸಿದ್ದರಾಮಯ್ಯ ಯಾವಾಗ ವಿಫಲ ಆಗುತ್ತಾರೆ ಆವಾಗೆಲ್ಲಾ ಜಾತಿ ಅಸ್ತ್ರ ತರುತ್ತಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಬೀದರ್‌ನಲ್ಲಿ ಮಾತನಾಡಿದ ಶೋಭಾ, 2013ರಲ್ಲಿ ವೀರಶೈವ- ಲಿಂಗಾಯತರನ್ನು ಒಡೆಯುವ ಕೆಲಸಕ್ಕೆ ಮುಂದಾಗಿದ್ದರು. ಈಗ ಎಲ್ಲ ಜಾತಿಗಳನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಒಕ್ಕಲಿಗ ಕ್ರಿಶ್ಚಿಯನ್, ಲಿಂಗಾಯತ್ ಕ್ರಿಶ್ಚಿಯನ್, ಗಾಣಿಗ ಕ್ರಿಶ್ಚಿಯನ್ ಸೇರಿ ಹಲವು ಹುಟ್ಟು ಹಾಕ್ತಿದ್ದಾರೆ. ಈ ಮೂಲಕ ನಮ್ಮ ಮೀಸಲಾತಿ ಕಿತ್ತುಕೊಳ್ಳುವ ಹುನ್ನಾರ ಮಾಡ್ತಿದ್ದಾರೆ. ಇಡೀ ಹಿಂದೂ ಒಟ್ಟಾಗಬೇಕಿದೆ, ಇಲ್ಲದಿದ್ರೆ ನಮ್ಮ ಭಾಗ ಭಾಗ ಮಾಡಿ ಹಾಕುತ್ತಾರೆ.
ತೆಲಂಗಾಣ ಸರ್ಕಾರಕ್ಕಿಂತಲೂ ಕರ್ನಾಟಕ ಸರ್ಕಾರ ಬರ್ಬಾದ್ ಆಗಿದೆ. ಕಾಂಗ್ರೆಸ್ ಸರ್ಕಾರಕ್ಕೆ ರಸ್ತೆ ರಿಪೇರಿ ಮಾಡೋಕೆ ದುಡ್ಡು ಇಲ್ಲಾ. ಇದಲ್ಲದೇ ಬೆಂಗಳೂರಿನಿಂದ ಕಂಪನಿಗಳು ಬೇರೆ ಕಡೆ ಹೋಗುತ್ತಿವೆ. ಎರಡೂವರೆ ವರ್ಷದಲ್ಲೇ ಸರ್ಕಾರ ಸಂಪೂರ್ಣ ಕಿತ್ಕೊಂಡು ಹೋಗಿದೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.



















