ಬಿಗ್‌ಬಾಸ್ ಮನೆಯಲ್ಲಿ ಮಸಿ ಬಳಿಯುವ ಟಾಸ್ಕ್ ಒಂದು ಏರ್ಪಡಿಸಲಾಗಿತ್ತು. ರಿಷಾ ಅವರಿಗೆ ಹೆಚ್ಚಾಗಿ ಸ್ಪರ್ಧಿಗಳು ಟಾರ್ಗೆಟ್ ಮಾಡಿ ಮಸಿ ಬಳಿದಿದ್ದರು. ಅದರಲ್ಲೂ ಸೂರಜ್ ಕೊಟ್ಟಿರುವ ಕೌಂಟರ್‌ಗೆ ಸೈಲೆಂಟ್ ಆಗಿದ್ದರು ರಿಷಾ. ಆದರೀಗ ರಿಷಾ ಕೂಗಾಟ, ಕಿರುಚಾಟ ಜಾಸ್ತಿ ಮಾಡಿದ್ದಾರೆ.
ಅವಕಾಶ ಸಿಕ್ಕಲ್ಲೆಲ್ಲ ಅವರು ಜಗಳ ಮಾಡಲು ಆರಂಭಿಸಿದ್ದಾರೆ. ಗಿಲ್ಲಿ ಕಳ್ಳ, ಸೂರಜ್ ಮಳ್ಳ ಎಂದು ರಿಷಾ ಅವರು ಹೇಳಿದ್ದಾರೆ. ‘ಕಳ್ಳನನ್ನು ನಂಬಿದರೂ ಮಳ್ಳನನ್ನು ನಂಬಲ್ಲ’ ಎಂದು ಅವರ ಎದುರಲ್ಲೇ ರಿಷಾ ಕೂಗಾಡಿದ್ದಾರೆ. ಅಷ್ಟೇ ಅಲ್ಲ ಬಿಗ್ ಬಾಸ್ ಟಾಸ್ಕ್ ಒಂದನ್ನ ನೀಡಿದ್ದರು. ಏಳು ಸದಸ್ಯರ ಪತ್ರದ ಪೈಕಿ ಇಬ್ಬರ ಪತ್ರವನ್ನ ಹರಿದು ಹಾಕಬೇಕಿತ್ತು. ಅದರಲ್ಲಿ ಸೂರಜ್ ಮತ್ತು ಸ್ಪಂದನಾ ಅವರ ಮನೆಯ ಪತ್ರವನ್ನ ಹರಿದು ಹಾಕಿದ್ದಾರೆ ರಿಷಾ. ಇನ್ನು ಸ್ಪಂದನಾ ಕೂಡ ಕಣ್ಣೀರಿಟ್ಟಿದ್ದಾರೆ.
ಸೂರಜ್ ಅವರು ರಿಷಾ ಅವರ ಬಳಿ ನಾನೇನು ಅಂತ ತಪ್ಪು ಮಾಡಿದ್ದೇನೆ ಎಂದು ಕೇಳಿದ್ದಾರೆ. ಇದೀಗ ರಿಷಾ, ಗಿಲ್ಲಿ ಸೂರಜ್ ನಡುವಿನ ಮನಸ್ತಾಪ ತಾರಕಕ್ಕೇರಿದೆ. ಇದನ್ನೂ ಓದಿ : ರಣಜಿ ಟ್ರೋಫಿ | ರಾಜಸ್ಥಾನ್ ವಿರುದ್ದ ಸ್ಪೋಟಕ ಶತಕ ಬಾರಿಸಿದ ಯಶಸ್ವಿ ಜೈಸ್ವಾಲ್!


















