ಎನ್‌ವಿಡಿಯಾ ಮಾಜಿ ಸಿಇಒ ಜೆನ್ಸನ್ ಹುವಾಂಗ್ ಅವರ ರಾಜೀನಾಮೆಯನ್ನು ಆಡಳಿತ ಮಂಡಳಿ ಅಂಗೀಕರಿಸಿದ್ದು, ಅವರನ್ನು ಮತ್ತೆ ಸಿಇಒ ಆಗಿ ನೇಮಿಸುವ ಉದ್ದೇಶವಿಲ್ಲ ಎಂದು ಆಡಳಿತ ಮಂಡಳಿ ಅಧ್ಯಕ್ಷ ಹಾರ್ವೆ ಜೋನ್ಸ್ ಸ್ಪಷ್ಟಪಡಿಸಿದ್ದಾರೆ.
ನನ್ನ ವೈಯಕ್ತಿಕ ಜೀವನದಲ್ಲಿ ತಪ್ಪು ಮಾಡಿದ್ದೇನೆ, ಆದರೆ ಕಂಪನಿಯ ಹಿತದೃಷ್ಟಿಯಿಂದ ಅವಕಾಶ ಕೊಟ್ಟರೆ ಮತ್ತೆ ಅಧಿಕಾರ ಪಡೆಯಲು ಸಿದ್ಧ ಎಂದು ಹುವಾಂಗ್ ಹೇಳಿದ್ದರು. ಆದರೆ ಯಾವುದೇ ಕಾರಣಕ್ಕೂ ಅವರಿಗೆ ಮರಳಿ ಅವಕಾಶ ನೀಡುವುದಿಲ್ಲ ಎಂದು ಕಂಪನಿ ಖಡಕ್ ಆಗಿ ತಿಳಿಸಿದೆ.


















