ಕಾರವಾರ : ಮಧ್ಯಪ್ರಾಚ್ಯದ ಯುದ್ಧ ಸಂಘರ್ಷದ ಪರಿಣಾಮವಾಗಿ ನಿಧಾನಗೊಂಡಿದ್ದ ಕಾರವಾರ ವಾಣಿಜ್ಯ ಬಂದರು ಚಟುವಟಿಕೆಗಳಿಗೆ ಇದೀಗ ಚೈತನ್ಯ ಬಂದಿದೆ. ಶಾರ್ಜಾ ಬಂದರಿನಿಂದ ಹೊರಟ ಎಮ್.ಎಸ್.ಜಿ ಹಡಗು ಹಾರ್ಮೊಜ್ ಜಲಸಂಧಿ ದಾಟಿ ಕಾರವಾರ ಬಂದರು ತಲುಪಿದೆ.
ಕಳೆದ ಒಂದು ತಿಂಗಳಿಂದ ಬಂದರಿನ ವಾಣಿಜ್ಯ ಚಟುವಟಿಕೆಗಳು ಸ್ತಬ್ಧವಾಗಿದ್ದವು. ಇದೀಗ ಸುಮಾರು 6200 ಮೆಟ್ರಿಕ್ ಟನ್ ಬಿಟುಮಿನ್ ಹೊತ್ತ ಎಮ್.ಎಸ್.ಜಿ ಹಡಗು, 35 ದಿನಗಳ ಬಳಿಕ ಬಂದರಿಗೆ ಬಂದಿರುವುದು ಗಮನಾರ್ಹ.
ಗಲ್ಪ್ ದೇಶಗಳಿಂದ ಹಡಗು ಆಗಮನದಿಂದ ಬಂದರು ವ್ಯಾಪಾರ ವಹಿವಾಟಿಗೆ ಹೊಸ ಚೈತನ್ಯ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಚಟುವಟಿಕೆಗಳು ಮತ್ತಷ್ಟು ವೇಗ ಪಡೆಯುವ ನಿರೀಕ್ಷೆ ವ್ಯಕ್ತವಾಗಿದೆ.
ಇದನ್ನೂ ಓದಿ : ಮನೆಗೆ ನುಗ್ಗಿ ಮಂಚದ ಕೆಳಗೆ ಅವಿತು ಕುಳಿತ ಚಿರತೆ.. ಹೌಹಾರಿದ ಕುಟುಂಬಸ್ಥರು!



















