ಬೆಂಗಳೂರೂ : ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರು ತಮ್ಮ ದಾಂಪತ್ಯ ಜೀವನವನ್ನು ಎಂಜಾಯ್ ಮಾಡ್ತಿದ್ದಾರೆ. ಮದುವೆ ಬಳಿಕ ಪತಿ ಜೊತೆ ಪ್ರವಾಸ ಮಾಡ್ತಿರುವ ಫೋಟೋಗಳನ್ನ ಇತ್ತೀಚೆಗೆ ಅನುಶ್ರೀ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ಪತಿ ರೋಷನ್ ಮಾಡಿರುವ ರುಚಿ ರುಚಿ ಅಡುಗೆ ಸವಿಯೋ ವಿಡಿಯೋವೊಂದನ್ನ ಸಹ ಹಂಚಿಕೊಂಡಿದ್ದಾರೆ.

ಮದುವೆ ಶಾಸ್ತ್ರದ ಬಳಿಕ ಮಾಧ್ಯಮದ ಜೊತೆ ಅನುಶ್ರೀ ಮಾತನಾಡುತ್ತಾ ಪತಿ ರೋಶನ್ ಚೆನ್ನಾಗಿ ಅಡುಗೆ ಮಾಡ್ತಾರೆ. ನಾನು ಆರಾಮಾಗಿ ತಿನ್ಕೊಂಡ್ ಇರ್ತೀನಿ ಎಂದು ಹೇಳಿ ನಕ್ಕಿದ್ದರು. ಇದೀಗ ಅದೇ ಚಿತ್ರಣವನ್ನ ತೋರಿಸಿದ್ದಾರೆ.

ರೋಶನ್ ತಮ್ಮ ಕೈಯಾರೇ ನುಗ್ಗೆಸೊಪ್ಪಿನ ಎಗ್‌ಬುರ್ಜಿ ಮಾಡಿ ಪರೋಟಾ ಜೊತೆ ಅನುಶ್ರೀಗೆ ತಿನ್ನಿಸಿದ್ದಾರೆ. ಈ ವೀಡಿಯೋವನ್ನ ಅನುಶ್ರೀ ಇನ್‌ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ‘coo”KING” with love for love by LOVE’ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.

ಈ ವಿಡಿಯೋಗೆ ನಿಮಿಷಕ್ಕೆ ಸಾವಿರಾರು ವೀವ್ಸ್ ಲೈಕ್ಸ್ ಬರುತ್ತಿದ್ದು, ಅಭಿಮಾನಗಳು ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಅನುಶ್ರೀಯ ಸುಖ ಸಂಸಾರಕ್ಕೆ ಯಾರ ದೃಷ್ಟಿಯೂ ಬೀಳದಿರಲಿ ಎಂದು ಶುಭ ಹಾರೈಸುತ್ತಿದ್ದಾರೆ. ಕಳೆದ ಆಗಸ್ಟ್ 28ರಂದು ಅನುಶ್ರೀ ಅವರು ಕೊಡಗು ಮೂಲದ ಐಟಿ ಉದ್ಯೋಗಿ ರೋಶನ್ ಜೊತೆ ವಿವಾಹವಾಗಿದ್ದರು.



















