ಬೆಂಗಳೂರು : ದೇಶದಲ್ಲಿಯೇ ಬೃಹತ್ ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್ ಜಿಯೋ ಈಗ ಗ್ರಾಹಕರಿಗೆ ಹೊಸ ಪ್ಲಾನ್ ಜಾರಿಗೊಳಿಸಿದೆ. ಮನೆಯಲ್ಲಿ ವೈಫೈ ಇದೆ, ಆಫೀಸ್ ಇಂಟರ್ನೆಟ್ ಸೌಲಭ್ಯವಿದೆ. ನಮಗೆ ಇಂಟರ್ನೆಟ್ ಬೇಡ, ಬರೀ ಉಚಿತ ಕರೆಗಳ ಸೌಲಭ್ಯ ಇದ್ದರೆ ಸಾಕು ಎನ್ನುವವರಿಗಾಗಿಯೇ ರಿಲಯನ್ಸ್ ಜಿಯೋ ಹೊಸ ಪ್ಲಾನ್ ಘೋಷಿಸಿದೆ. 448 ರೂಪಾಯಿ ರಿಚಾರ್ಜ್ ಮಾಡಿದರೆ ಸಾಕು, 84 ದಿನಗಳವರೆಗೆ ಉಚಿತ ಕರೆಗಳು ಸೇರಿ ಹಲವು ಸೌಲಭ್ಯಗಳನ್ನು ಪಡೆಯಬಹುದಾಗಿದೆ.
ಹೊಸ ಪ್ಲಾನ್ ನ ಪ್ರಮುಖ ಅಂಶಗಳು
ಬೆಲೆ: 448 ರೂಪಾಯಿ
ವ್ಯಾಲಿಡಿಟಿ (ಮಾನ್ಯತೆ): 84 ದಿನಗಳು
ವಾಯ್ಸ್ ಕಾಲ್: ಯಾವುದೇ ನೆಟ್ ವರ್ಕ್ ಗೆ ಅನಿಯಮಿತ ಉಚಿತ ಕರೆಗಳು
SMS: ಪ್ಲಾನ್ ಅವಧಿಯಲ್ಲಿ ಒಟ್ಟು 1 ಸಾವಿರ ಮೆಸೇಜ್ ಕಳುಹಿಸುವ ಸೌಲಭ್ಯ
ಹೆಚ್ಚುವರಿ ಪ್ರಯೋಜನಗಳು: JioTV ಮತ್ತು JioAICloud ಸೇವೆಗಳು ಲಭ್ಯ
ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಅನ್ ಲಿಮಿಟೆಡ್ ವಾಯ್ಸ್ ಕರೆಗಳನ್ನು ಮಾಡುವ ಸೌಲಭ್ಯ ನೀಡಬೇಕು ಎಂಬ ದೃಷ್ಟಿಯಿಂದ ಹೊಸ ಪ್ಲಾನ್ ಘೋಷಿಸಲಾಗಿದೆ. ಈ ಪ್ಲಾನ್ ನಲ್ಲಿ ಗ್ರಾಹಕರಿಗೆ ಯಾವುದೇ ಇಂಟರ್ನೆಟ್ ಸೌಲಭ್ಯ ಇರುವುದಿಲ್ಲ. ಇದಕ್ಕಾಗಿ ಪ್ರತ್ಯೇಕವಾಗಿ ರಿಚಾರ್ಜ್ ಮಾಡಿಸಿಕೊಳ್ಳಬೇಕಾಗುತ್ತದೆ ಎಂದು ಕಂಪನಿಯು ಮಾಹಿತಿ ನೀಡಿದೆ. ಕೇವಲ ವಾಯ್ಸ್ ಕಾಲ್ ಹಾಗೂ ಮೆಸೇಜ್ ಕಳುಹಿಸುವವರಿಗೆ ಇದು ಒಳ್ಳೆಯ ಪ್ಲಾನ್ ಆಗಿದೆ.
ಹೆಚ್ಚಿನ ಜನ ಎರಡು ಸಿಮ್ ಕಾರ್ಡ್ ಹೊಂದಿರುತ್ತಾರೆ. ಒಂದರಲ್ಲಿ ಮಾತ್ರ ಇಂಟರ್ನೆಟ್ ಬಳಸುತ್ತಿರುತ್ತಾರೆ. ಅವರು ಇನ್ನೊಂದು ಸಿಮ್ ಬಿಡಲು ಇಷ್ಟಪಡುವುದಿಲ್ಲ. ಅಂತಹವರಿಗೂ ಇದು ಒಳ್ಳೆಯ ಆಫರ್ ಎನಿಸಿದೆ. ದೇಶದಲ್ಲಿ ರಿಲಯನ್ಸ್ ಜಿಯೋ 51 ಕೋಟಿ ಗ್ರಾಹಕರನ್ನು ಹೊಂದಿದ್ದು, ದೇಶದ ಅತಿದೊಡ್ಡ ಟೆಲಿಕಾಂ ಕಂಪನಿ ಎನಿಸಿದೆ. ಕಂಪನಿಯು ಆಗಾಗ ಗ್ರಾಹಕರಿಗೆ ಹೊಸ ಹೊಸ ಪ್ಲಾನ್ ಗಳನ್ನು ಪರಿಚಯಿಸುತ್ತಲೇ ಇರುತ್ತದೆ.
ಇದನ್ನೂ ಓದಿ : 50ನೇ ವಸಂತಕ್ಕೆ ಕಾಲಿಟ್ಟ ಹೋಂಡಾ ಅಕಾರ್ಡ್ : 2027-2028ಕ್ಕೆ ಹೈಬ್ರಿಡ್ ಆವೃತ್ತಿಯೊಂದಿಗೆ ಮಾರುಕಟ್ಟೆಗೆ ಭರ್ಜರಿ ಕಂಬ್ಯಾಕ್!



















