ಬೆಂಗಳೂರು : ನಗರದಲ್ಲಿ ಮದುವೆ ಸಮಾರಂಭಗಳಿಗೆ ಬರುವ ಮಕ್ಕಳನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಖತರ್ನಾಕ್ ಕಳ್ಳನನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಾಬು ಅಲಿಯಾಸ್ ಪಲ್ಸರ್ ಬಾಬು ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಮದುವೆ ನಡೆಯುವ ಚೌಟ್ರಿಗಳಿಗೆ ಟಿಪ್ ಟಾಪ್ ಆಗಿ ಬಟ್ಟೆ ಧರಿಸಿ ಹೋಗುತ್ತಿದ್ದ ಈ ಆಸಾಮಿ, ಚಿನ್ನಾಭರಣ ಧರಿಸಿ ಬಂದ ಮಕ್ಕಳನ್ನೇ ಗುರಿಯಾಗಿಸಿಕೊಂಡು ಯಾಮಾರಿಸುತ್ತಿದ್ದ. ಪರಿಚಯಸ್ಥನಂತೆ ಮಾತಾಡಿ ಅವರ ವಿಶ್ವಾಸ ಗೆದ್ದು ಕ್ಷಣಾರ್ಧದಲ್ಲಿ ಕತ್ತಿನಲ್ಲಿದ್ದ ಚಿನ್ನದ ಸರಗಳನ್ನು ಕದ್ದುಕೊಂಡು ಪರಾರಿಯಾಗುತ್ತಿದ್ದ.
ಬಂಧನದ ಬಳಿಕ ಈತನ ವಿರುದ್ಧದ ಎಂಟು ಪ್ರಕರಣಗಳು ಬೆಳಕಿಗೆ ಬಂದಿದ್ದು, ಹಲವಾರು ಮದುವೆ ಮಂಟಪಗಳಲ್ಲಿ ಇದೇ ರೀತಿಯ ಕಳ್ಳತನ ನಡೆಸಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಈ ಸಂಬಂಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ನಷ್ಟು ಪ್ರಕರಣಗಳ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ : ನದಿಯಲ್ಲಿ ಆಟವಾಡುತ್ತಿದ್ದಾಗ ಕಾಡಾನೆ ದಾಳಿ.. ದಿಕ್ಕಾಪಾಲಾಗಿ ಓಡಿದ ಪ್ರವಾಸಿಗರು!


















