ಕಾರವಾರ: ಜೈಲಿನಲ್ಲಿ ತಂಬಾಕು ಮತ್ತು ಇನ್ನಿತರ ಮಾದಕ ವಸ್ತುಗಳ ಬಳಕೆಗೆ ಆಸ್ಪದ ನೀಡದ ಕಾರಣಕ್ಕೆ ಜೈಲಿನ ಮೂವರು ಸಿಬ್ಬಂದಿ ಮತ್ತು ಜೈಲರ್ ಮೇಲೆ ಹಲ್ಲೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ.
ಮಂಗಳೂರು ಮೂಲದ ಮೊಹಮ್ಮದ್ ಅಬ್ದುಲ್, ಫಯಾನ್ ಹಾಗೂ ಕೌಶಿಕ್ ನಿಹಾಲ್ ದಾಳಿ ಮಾಡಿದ ಕೈದಿಗಳು. ಘಟನೆ ತಿಳಿದ ಕೂಡಲೇ 20ಕ್ಕೂ ಹೆಚ್ಚು ಪೊಲೀಸರು ಸೈಳಕ್ಕೆ ಧಾವಿಸಿ ಪರಿಶಿಲನೆ ನಡೆಸಿದ್ದು, ಪರಿಸ್ಥಿತಿಯನ್ನು ಹಿಡಿತಕ್ಕೆ ತಂದಿದ್ದಾರೆ.
ದಾಳಿ ಮಾಡಿದ ಮೂವರು ಕೈದಿಗಳಲ್ಲಿ ಆರೋಪಿ ಫಯಾನ್ ಈ ಹಿಂದೇ ಮಂಗಳೂರಿನ ಜೈಲಿನಲ್ಲಿಯೂ ದಾಳಿ ನಡೆಸಿದ್ದು, ಮೊಬೈಲ್ ಹಾಗೂ ತಂಬಾಕು ವಶಪಡಿಸಿಕೊಂಡಿದಕ್ಕೆ ಕೋಪಗೊಂಡ ಫಯಾನ್, ಅಂದಿನ ಮಂಗಳೂರು ಪೊಲೀಸ್ ಕಮಿಷನರ್ ಹಾಗೂ ಐಪಿಎಸ್ ಅಧಿಕಾರಿ ಶಶಿಕುಮಾರ್ ಅವರ ಮೇಲೆ ಹಲ್ಲೆ ನಡೆಸಿದ್ದ. ಇಂದು ಮತ್ತೆ ಕಾರವಾರ ಜೈಲಿನಲ್ಲೂ ತಂಬಾಕಿಗಾಗಿ ಜೈಲರ್ ಹಾಗೂ ಮೂವರು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ.ಮಾಡಿರುವುದು ಆತಂಕ ಹುಟ್ಟಿಸಿದೆ.
ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಲ್ಲಿ ಸಿಗರೇಟ್, ಡ್ರಗ್ಸ್ ಪತ್ತೆ | ವಾರ್ಡರ್ ಅರೆಸ್ಟ್!


















