ದುಬಾರಿ ದುನಿಯಾದಲ್ಲಿ ಜನರಿಗೆ ಮತ್ತೊಂದು ಶಾಕ್ ಎದುರಾಗಿದೆ. ದೀಪಾವಳಿ ಸಂದರ್ಭದಲ್ಲೇ ಮತ್ತೆ ಬೆಲೆ ಏರಿಕೆ ಸ್ಫೋಟಗೊಂಡಿದ್ದು, ಹಾಲು, ಮೊಸರು ಬಳಿಕ ಇದೀಗ ಬೆಣ್ಣೆ ಮತ್ತು ತುಪ್ಪದ ಬೆಲೆ ಗಗನಕ್ಕೇರಿದೆ. ನಂದಿನಿ ತುಪ್ಪ, ಬೆಣ್ಣೆ ಹಾಗೂ ಪನ್ನೀರ್ ಬೆಲೆಯಲ್ಲಿ ಭಾರೀ ಹೈಕ್ ಮಾಡಲಾಗಿದ್ದು, ನಂದಿನಿ ಬೆಣ್ಣೆ ಕೆಜಿಗೆ ಬರೋಬ್ಬರಿ 80 ರೂಪಾಯಿ ಹೆಚ್ಚಳವಾಗಿದೆ.
ಇನ್ನು ನಂದಿನಿ ತುಪ್ಪ ಲೀಟರ್ಗೆ ಬರೋಬ್ಬರಿ 100 ರೂಪಾಯಿ ಏರಿಕೆಯಾಗಿದೆ. ಇದರಿಂದಾಗಿ 750 ರೂಪಾಯಿ ಇದ್ದ ನಂದಿನಿ ತುಪ್ಪದ ಬೆಲೆ ಈಗ 850 ರೂಪಾಯಿಗೆ ತಲುಪಿದ್ದರೆ, 700 ರೂಪಾಯಿ ಇದ್ದ ಬೆಣ್ಣೆ ಬೆಲೆ ಈಗ 780 ರೂಪಾಯಿಗೆ ಜಂಪ್ ಆಗಿದೆ.

















