ನವದೆಹಲಿ : ಷೇರು ಮಾರುಕಟ್ಟೆಯು ದಿನೇದಿನೆ ಕುಸಿತ ಕಾಣುತ್ತಿರುವುದರಿಂದ ಹೆಚ್ಚಿನ ಜನ ಸುರಕ್ಷಿತ ಹೂಡಿಕೆಗಳತ್ತ ಮುಖ ಮಾಡುತ್ತಿದ್ದಾರೆ. ಅದರಲ್ಲೂ, ಪ್ರತಿ ತಿಂಗಳು 10 ಸಾವಿರ ರೂಪಾಯಿಯನ್ನು ಸುರಕ್ಷಿತವಾಗಿ ಹೂಡಿಕೆ ಮಾಡಲು ಬಯಸುವವರಿಗೆ ಪೋಸ್ಟ್ ಆಫೀಸ್ ರೆಕರಿಂಗ್ ಡೆಪಾಸಿಟ್ (RD) ಮತ್ತು ಬ್ಯಾಂಕ್ ಉಳಿತಾಯ ಖಾತೆ (Savings Bank Deposit) ಪ್ರಮುಖ ಆಯ್ಕೆಗಳಾಗಿವೆ. ಆದರೆ 5 ವರ್ಷಗಳ ಅವಧಿಯಲ್ಲಿ ಯಾವ ಯೋಜನೆಯಿಂದ ಹೆಚ್ಚು ಲಾಭ ಸಿಗುತ್ತದೆ ಎಂಬುದನ್ನು ಲೆಕ್ಕ ಹಾಕಿದರೆ ಪೋಸ್ಟ್ ಆಫೀಸ್ ಆರ್ ಡಿ ಮುಂಚೂಣಿಯಲ್ಲಿದೆ.
ಪೋಸ್ಟ್ ಆಫೀಸ್ ಆರ್ ಡಿ ಬಡ್ಡಿದರ ಎಷ್ಟು?
ಪ್ರಸ್ತುತ ಪೋಸ್ಟ್ ಆಫೀಸ್ 5 ವರ್ಷದ ಆರ್ ಡಿ ಯೋಜನೆಗೆ ವಾರ್ಷಿಕ ಶೇ.6.7ರಷ್ಟು ಬಡ್ಡಿದರ ನೀಡುತ್ತಿದೆ. ಈ ಬಡ್ಡಿಯನ್ನು ತ್ರೈಮಾಸಿಕವಾಗಿ ಸಂಯೋಜಿಸಲಾಗುತ್ತದೆ. ಒಬ್ಬ ಹೂಡಿಕೆದಾರನು ಪ್ರತಿ ತಿಂಗಳು 10 ಸಾವಿರ ರೂ.ನಂತೆ 5 ವರ್ಷ ಹೂಡಿಕೆ ಮಾಡಿದರೆ ಎಷ್ಟು ಲಾಭ ಸಿಗುತ್ತದೆ ಎಂಬುದರ ಲೆಕ್ಕಾಚಾರ ಇಲ್ಲಿದೆ.
- ಒಟ್ಟು ಹೂಡಿಕೆ: 6 ಲಕ್ಷ ರೂ.
- ಅಂದಾಜು ಮೆಚ್ಯೂರಿಟಿ ಮೊತ್ತ: 7.15 ಲಕ್ಷದಿಂದ 7.20 ಲಕ್ಷ ರೂ.
- ಬಡ್ಡಿ ಆದಾಯ: ಸುಮಾರು 1.15 ಲಕ್ಷದಿಂದ 1.20 ಲಕ್ಷ ರೂ.
ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಎಷ್ಟು ಸಿಗಬಹುದು?
ಹೆಚ್ಚಿನ ಬ್ಯಾಂಕ್ ಗಳ ಉಳಿತಾಯ ಖಾತೆಗಳು ವಾರ್ಷಿಕ 2.5% ರಿಂದ 4% ಬಡ್ಡಿದರ ನೀಡುತ್ತವೆ. ತಿಂಗಳಿಗೆ 10 ಸಾವಿರ ರೂ. ಉಳಿತಾಯ ಖಾತೆಯಲ್ಲಿ ಜಮಾ ಮಾಡುತ್ತಾ ಹೋದರೆ 5 ವರ್ಷಗಳ ನಂತರ ಎಷ್ಟು ಲಾಭ ಎಂಬುದನ್ನು ತಿಳಿಯೋಣ ಬನ್ನಿ.
- ಒಟ್ಟು ಠೇವಣಿ: 6 ಲಕ್ಷ ರೂ.
- ಅಂದಾಜು ಮೌಲ್ಯ: 6.30 ಲಕ್ಷದಿಂದ 6.60 ಲಕ್ಷ ರೂ.
- ಬಡ್ಡಿ ಆದಾಯ: 30 ಸಾವಿರದಿಂದ 60 ಸಾವಿರ ರೂ. ಮಾತ್ರ
ಇದನ್ನೂ ಓದಿ : ಚಿನ್ನ ಖರೀದಿಸುವವರಿಗೆ ಬಂಪರ್ : ಇಂದು ಪ್ರತಿ ಗ್ರಾಂಗೆ 4,300 ರೂಪಾಯಿ ಭರ್ಜರಿ ಇಳಿಕೆ!



















