ಅಮೆರಿಕಾ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಘೋಷಿಸಿದ ಪಾಪಿ ಪಾಕಿಸ್ತಾನ, ತನ್ನ ಬೆನ್ನಿಗೆ ಚೂರಿ ಹಾಕುವ ಬುದ್ಧಿ ತೋರಿಸಿದೆ. ನಿನ್ನೆ ಮಧ್ಯಾಹ್ನ ಅಮೆರಿಕಾದ ಜೊತೆಗೆ ಮಾತುಕತೆ ಬಳಿಕ ಭಾರತ ಹಾಗೂ ಪಾಕಿಸ್ಥಾನ ಕದನ ವಿರಾಮಕ್ಕೆ ಸಮ್ಮತಿ ಸೂಚಿಸಿತ್ತು. ಆದರೆ, ರಾತ್ರಿ 8 ಘಂಟೆಯ ಸುಮಾರಿಗೆ ಪಾಕಿಸ್ತಾನದ ಸೈನ್ಯ ನಾಲ್ಕು ರಾಜ್ಯಗಳ ಮೇಲೆ ಡ್ರೋಣ್ ಹಾರಿಸುವ ಮೂಲಕ ಮತ್ತೆ ತನ್ನ ಬುದ್ಧಿ ತೋರಿಸಿದೆ. ಈ ಮೂಲಕ ಕದನ ವಿರಾಮ ಉಲ್ಲಂಘಿಸಿದೆ.



















