ಬಸ್ ಟಿಕೆಟ್ ದರ ಏರಿಕೆ ವಿರುದ್ಧ ವಿಪಕ್ಷಗಳು ಕೆಂಡಾಮಂಡಲವಾಗಿವೆ. ಇದು ಗಬ್ಬರ್ ಟ್ಯಾಕ್ಸ್ ಸರ್ಕಾರ ಎಂದು ವಿಪಕ್ಷ ನಾಯಕ ಕಿಡಿಕಾರಿದ್ದು, ಈ ಸರ್ಕಾರಕ್ಕೆ ಯಾವುದೇ ಮಾನವೀಯತೆ ಇಲ್ಲ ಎಂದು ವಿಜಯೇಂದ್ರ ಆಕ್ರೋಶ ಹೊರಹಾಕಿದ್ದಾರೆ.
ಇತ್ತ ವಿಪಕ್ಷಗಳ ಟೀಕೆಗೆ ತಿರುಗೇಟು ನೀಡಿರುವ ಸಿಎಂ ಡಿಕೆ ಶಿವಕುಮಾರ್, ಡೀಸೆಲ್ ಮತ್ತು ಗ್ಯಾಸ್ ದರ ಹೆಚ್ಚಾದಾಗ ಇವರೆಲ್ಲ ಏನ್ ಮಾಡ್ತಿದ್ರು ಎಂದು ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.


















