ಬೆಂಗಳೂರು : ಭಾವನೆಗಳ ಸಾಗರ ಹರಿಸೋ ಉತ್ಸಾಹದಲ್ಲೇ ‘ಲವ್ ಸೀಸನ್ಸ್’ ಸಿನಿಮಾ ತೆರೆಗೆ ಅಪ್ಪಳಿಸಿದೆ. ಹೊಸ ಕಾಲದಲ್ಲೊಂದು ನಯಾ ಲವ್ ಸ್ಟೋರಿ ಎಂಬ ಪ್ರೀತಿಯ ಆಹ್ವಾನ ಚಿತ್ರದ ಮೈಲೇಜ್ ಹೆಚ್ಚಿಸಿದೆ.

ಎಲ್ಲಾ ಕಾಲಕ್ಕೂ ಈ ಸೀಸನ್ಸ್ ಸೀಸನಲ್ ಟಚ್ ಕೊಡ್ತಿದೆ. ಟ್ರೈಲರ್ ಹಾಗೂ ಹಾಡುಗಳ ಮೂಲಕವೇ ಪ್ರಮೋಷನ್ ಬಿಸಿ ಹತ್ತಿಸಿಕೊಂಡ ‘ಲವ್ ಸೀಸನ್ಸ್’ ಒಂದು ನವಿರಾದ ಪ್ರೇಮಕಥೆಯೊಂದಿಗೆ ಪ್ರೇಕ್ಷಕರಿಗೆ ಹತ್ತಿರವಾಗ್ತಿದೆ.

ಹೀರೊ ಮುಕುಂದ ರಾಮಸ್ವಾಮಿ ಭರವಸೆಯ ನಾಯಕನಾಗೋ ಸಿಗ್ನಲ್ ಕೊಟ್ರೆ, ಶ್ವೇತಾ ಕೊಗ್ಲೂರ್, ದಿಯಾ ಕೀರ್ತಿ ಹಾಗೂ ಚಂದನಗೌಡ ಪಾತ್ರಗಳಿಗೆ ಆಪ್ಟ್ ಆಗುವಂತೆ ನಟಿಸಿದ್ದಾರೆ.
ನಿರ್ದೇಶಕ ಕೃತ್ವಿಕ್ ಪ್ರೀತಿಯ ಇನ್ನೊಂದು ಅರ್ಥವನ್ನ ಸಿನಿಮಾದಲ್ಲಿ ತೋರಿಸೋ ಪ್ರಯತ್ನ ಮಾಡಿದ್ದಾರೆ. ನಿರ್ಮಾಪಕ ಮಂಜುನಾಥ್ ನಿಲೇರಿ ಒಂದು ಮುದ್ದಾದ ಕಥೆಗೆ ಜೀವ ತುಂಬಿದ ತೃಪ್ತಿಯಲ್ಲಿದ್ರು. ವೀರ್ ಸಮರ್ಥ್ ಮ್ಯೂಸಿಕ್ ನೋಡುಗರ ದಿಲ್ ಕದ್ದಿದೆ. ಬೆಂಗಳೂರಿನ ಕಪಾಲಿ ಚಿತ್ರಮಂದಿರದಲ್ಲಿ ‘ಲವ್ ಸೀಸನ್ಸ್’ ಹೌಸ್ ಫುಲ್ ಆಗಿದ್ದು, ಪ್ರೇಕ್ಷಕರು ‘ಲವ್ ಸೀಸನ್ಸ್’ ಎಂಟ್ರಿಯನ್ನ ಬಿಗಿದಪ್ಪಿಕೊಂಡಿದ್ದಾರೆ.
ಇದನ್ನೂ ಓದಿ : ಹನುಮನ ಜನ್ಮಭೂಮಿ ಅಂಜನಾದ್ರಿಗೆ ರಾಹುಲ್ ದ್ರಾವಿಡ್ ದಂಪತಿ ಭೇಟಿ



















