ಬೆಂಗಳೂರು: ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ಹೆಬ್ಬಾಳ ಫ್ಲೈ ಓವರ್ ಬಂದ್ ಆಗಿರುತ್ತದೆ ಎಂದು ನಗರ ಸಂಚಾರ ಪೊಲೀಸರು ಸೂಚಿಸಿದ್ದಾರೆ.
ಹೆಬ್ಬಾಳ ಫ್ಲೈಓವರ್ ಗೆ ಡಾಂಬರೀಕರಣ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಂಚಾರ ಸ್ಥಗಿತಗೊಂಡಿರುತ್ತದೆ. ಇಂದು ರಾತ್ರಿ 11.30 ರಿಂದ ಬೆಳಗಿನ ಜಾವ 5 ಗಂಟೆಯವರೆಗೆ ಬಂದ್ ಆಗಿರಲಿದೆ. ಹೀಗಾಗಿ ಕೆಐಎಎಲ್ ಏರ್ಪೋರ್ಟ್ ಕಡೆಯಿಂದ ನಗರಕ್ಕೆ ಬರುವ ಮಾರ್ಗ ಬಂದ್ ಆಗಿರಲಿದೆ.
ಫ್ಲೈ ಓವರ್ ಬಂದ್ ಆಗುವ ಹಿನ್ನೆಲೆಯಲ್ಲಿ ವಾಹನ ಸವಾರರು ಬದಲಿ ಮಾರ್ಗ ಬಳಸಲು ಸೂಚಿಸಲಾಗಿದೆ. ವಾಹನ ಸವಾರರು ಹೆಬ್ಬಾಳ ಸರ್ಕಲ್ ಮೂಲಕ ಬಿಇಎಲ್ ವೃತ್ತ, ಸದಾಶಿವನಗರ ಠಾಣೆ ಮೂಲಕ ಹಾಯ್ದು ಸಂಚರಿಸಲು ನಗರ ಸಂಚಾರ ಪೊಲೀಸರು ಸೂಚಿಸಿದ್ದಾರೆ.



















