ತಾಂತ್ರಿಕ ದೋಷದಿಂದಾಗಿ ಪ್ರಧಾನಿ ಮೋದಿ ಬೆಂಗಾವಲು ಹೆಲಿಕಾಪ್ಟರ್ ಮೈಸೂರಲ್ಲೇ ಉಳಿದುಕೊಂಡಿದೆ. ಭಾರತೀಯ ವಾಯುಸೇನೆಗೆ ಸೇರಿದ ಹೆಲಿಕಾಪ್ಟರ್ ಇದಾಗಿದೆ.
ಪ್ರಧಾನಿ ಮೋದಿ ಹೆಲಿಕಾಪ್ಟರ್‌ನಲ್ಲಿ ಮೈಸೂರಿಗೆ ತೆರಳಿದ್ದರು. ಮೋದಿಯವರ ಬೆಂಗಾವಲಿಗೆ ಎರಡು ಹೆಲಿಕಾಪ್ಟರ್ ಬಂದಿದ್ದವು. ಒಟ್ಟು ಮೂರು ಹೆಲಿಕಾಪ್ಟರ್‌ಗಳು ಟೇಕ್ ಆಫ್ ಆಗಬೇಕಿತ್ತು. ತಾಂತ್ರಿಕ ದೋಷದಿಂದ ಒಂದು ಕಾಪ್ಟರ್ ಮಾತ್ರ ಇಲ್ಲೇ ಉಳಿದುಕೊಂಡಿದೆ.


















