ಉತ್ತರ ಕನ್ನಡ ಜಿಲ್ಲೆಯಲ್ಲಿ ಚಮನ್ ಮೀನಿನಿಂದ ಬಿಡುಗಡೆಯಾದ ವಿಷಕಾರಿ ಅನಿಲ ಸೇವಿಸಿ ಐವರು ಮೀನುಗಾರರು ಮೃತಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ.
ಅಕ್ಟೋಬರ್ 27ರಂದು ಗೋಕರ್ಣದ ತದಡಿಯಲ್ಲಿ ಮೂವರು ಹಾಗೂ ಅಕ್ಟೋಬರ್ 31ರಂದು ಕಾರವಾರದ ಮುದುಗದಲ್ಲಿ ಇಬ್ಬರು ಮೀನುಗಾರರು ಸಾವನ್ನಪ್ಪಿದ್ದರು. ಬೋಟ್ಗಳ ಸ್ಟೋರೇಜ್ನಿಂದ ಮೀನುಗಳನ್ನು ಹೊರತೆಗೆಯುವಾಗ ಅಮೋನಿಯಾ ಮತ್ತು ಹೈಡ್ರೋಜನ್ ಸಲ್ಫೈಡ್ನಂತಹ ಅಪಾಯಕಾರಿ ಅನಿಲ ಸೋರಿಕೆಯಿಂದ ಈ ದುರಂತ ಸಂಭವಿಸಿತ್ತು.
ಈ ಹಿನ್ನೆಲೆಯಲ್ಲಿ ಕಾರವಾರ, ಕುಮಟಾ, ಬೈತಖೋಲ್ ಹಾಗೂ ಹೊನ್ನಾವರ ಸೇರಿದಂತೆ ವಿವಿಧ ಬಂದರುಗಳಲ್ಲಿ ವಿಶೇಷ ಜಾಗೃತಿ ಸಭೆಗಳನ್ನು ನಡೆಸಲಾಗಿದೆ. ಮೀನುಗಳನ್ನು ಸಂಗ್ರಹಣಾ ಟ್ಯಾಂಕ್ಗಳ ಒಳಗೆ ನೇರವಾಗಿ ಇಳಿಯಬಾರದು, ಗ್ಯಾಸ್ ಡಿಟೆಕ್ಟರ್ ಮೂಲಕ ಅನಿಲ ಪರೀಕ್ಷಿಸಬೇಕು ಮತ್ತು ಉಸಿರಾಟದ ಸುರಕ್ಷತಾ ಸಾಧನಗಳನ್ನು ಕಡ್ಡಾಯವಾಗಿ ಬಳಸುವಂತೆ ಮೀನುಗಾರಿಕೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ.


















