ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಶಿವಪುರ ಗ್ರಾಮದಲ್ಲಿ ಕಾಡಾನೆಗಳ ದಾಳಿಗೆ ಬೆಳೆ ನಾಶವಾಗಿದೆ. ಗ್ರಾಮದ ಪುಟ್ಟಸ್ವಾಮಿ, ಪುಟ್ಟರಾಜು ಮತ್ತು ಗೋವಿಂದಯ್ಯ ಎಂಬ ರೈತರಿಗೆ ಸೇರಿದ ಬೆಳೆಗಳಿಗೆ ಹಾನಿಯಾಗಿದೆ. ಕಾಡಾನೆಗಳ ದಾಳಿಯಿಂದ 800ಕ್ಕೂ ಹೆಚ್ಚು ಬಾಳೆಗಿಡಗಳು, ಒಂದು ಎಕರೆ ಟೊಮ್ಯಾಟೊ ಹಾಗೂ ಒಂದು ಎಕರೆ ಮುಸುಕಿನ ಬೆಳೆ ಸಂಪೂರ್ಣ ನಾಶವಾಗಿದೆ.
ಬೆಳೆ ಕಳೆದುಕೊಂಡಿರುವ ರೈತರು ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ಅಲ್ಲದೆ ಈ ಭಾಗದಲ್ಲಿ ಕಾಡಾನೆ ಹಾವಳಿ ತಡೆಗಟ್ಟಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.


















