ಬೆಂಗಳೂರು : ಕೂಲಿ ಕೆಲಸಕ್ಕೆಂದು ಜಾರ್ಖಂಡ್ನಿಂದ ಬಂದ ಯುವಕನೋರ್ವ ರಸ್ತೆಯಲ್ಲಿ ಹೋಗ್ತಿದ್ದ ಲಾರಿ ಚಕ್ರಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಕುಂಬಳಗೋಡಿನಲ್ಲಿ ನಡೆದಿದೆ. ಈತ ಸೂಸೈಡ್ ಮಾಡಿಕೊಂಡ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕುಂಬಳಗೋಡು ಬಳಿ ಆರಾಮಾಗಿ ಅಂಗಡಿ ಮುಂದೆ ಕೂತಿದ್ದ ಜಾರ್ಖಂಡ್ ಮೂಲದ ರಾಜು ಪಹರಿಯಾ, ಬಳಿಕ ವಾಹನಗಳನ್ನ ನೋಡ್ತಾ ರಸ್ತೆ ದಾಡುವವನಂತೆ ಎದ್ದು ಬಂದಿದ್ದಾನೆ. ನೋಡ ನೋಡ್ತಿದ್ದಂತೆ ಲಾರಿ ಕಂಡು ರಸ್ತೆಗೆ ಹಾರಿದ್ದು, ಲಾರಿ ಚಕ್ರ ಹರಿದು ಸ್ಥಳದಲ್ಲೇ ರಾಜು ಸಾವನ್ನಪ್ಪಿದ್ದಾನೆ. ಈ ಯುವಕ ಆತ್ಮಹತ್ಯೆ ಮಾಡಿಕೊಂಡ ದೃಶ್ಯ ಎದೆ ಝಲ್ ಎನ್ನುವಂತಿದೆ.
ಕೂಲಿಗಾಗಿ ನಗರಕ್ಕೆ ಬಂದವನು ಎರಡೇ ದಿನಕ್ಕೆ ಸಾವಿಗೆ ಶರಣಾಗಿದ್ದು ದುರಂತವೇ ಸರಿ, ಲಾರಿಗೆ ಸಿಕ್ಕಿ ಯುವಕ ಆತ್ಮಹತ್ಯೆ ಮಾಡಿಕೊಂಡ ಭಯಾನಕ ದೃಶ್ಯ ಸೆರೆಯಾಗಿದೆ. ಏಪ್ರಿಲ್ 11 ರಂದು ರೈಲಿನಲ್ಲಿ ಬೆಂಗಳೂರಿಗೆ ಬಂದಿದ್ದ ರಾಜು, ವೈಯಕ್ತಿಕ ವಿಚಾರಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಕುಂಬಳಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಕೋಲಾರದಲ್ಲಿ ಪುಡಿರೌಡಿಗಳ ಅಟ್ಟಹಾಸ.. ಕ್ಷುಲ್ಲಕ ಕಾರಣಕ್ಕೆ ಮಳಿಗೆಗೆ ನುಗ್ಗಿ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಹಲ್ಲೆ!


















