ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ದೇಶ

ಕೇರಳಕ್ಕೆ ಮುಂಗಾರು ಪ್ರವೇಶ ಮತ್ತೆ ವಿಳಂಬ : ಅನ್ನದಾತರಿಗೆ ತೀವ್ರ ಆತಂಕ

June 1, 2026
Share on WhatsappShare on FacebookShare on Twitter

ನವದೆಹಲಿ : ಬಿಸಿಲ ಬೇಗೆಯಿಂದ ಬೆಂದು ಹೋಗಿರುವ ಭಾರತೀಯರಿಗೆ ಸದ್ಯಕ್ಕೆ ವರುಣದೇವ ಕೃಪೆ ತೋರಿಸುವ ಲಕ್ಷಣಗಳು ಕಾಣಿಸುತ್ತಿಲ್ಲ. ದೇಶದ ಅನ್ನದಾತರು, ಕೋಟ್ಯಂತರ ಜನರು ಕಾಯುತ್ತಿರುವ ನೈಋತ್ಯ ಮುಂಗಾರು ಮಾರುತಗಳ ಆಗಮನವು ಮತ್ತೊಮ್ಮೆ ವಿಳಂಬವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಈಗಾಗಲೇ ಮೂರು ಬಾರಿ ಮುಂಗಾರು ಪ್ರವೇಶದ ದಿನಾಂಕವನ್ನು ಮುಂದೂಡಿರುವ ಹವಾಮಾನ ಇಲಾಖೆಯು, ಜೂನ್ 3 ರ ಮೊದಲು ಕೇರಳಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆಯಿಲ್ಲ ಮತ್ತು ಈ ದಿನಾಂಕ ಇನ್ನೂ ಮುಂದೆ ಹೋಗುವ ಸಾಧ್ಯತೆಯೂ ಇದೆ ಎಂದು ಹೇಳಿದ್ದು, ದೇಶಾದ್ಯಂತ ಭಾರೀ ಆತಂಕಕ್ಕೆ ಕಾರಣವಾಗಿದೆ.

ಉಲ್ಟಾ ಹೊಡೆದ ಲೆಕ್ಕಾಚಾರ

ವಿಶೇಷವೆಂದರೆ, ಹವಾಮಾನ ಇಲಾಖೆಯು ಆರಂಭದಲ್ಲಿ ಈ ಬಾರಿ ಮುಂಗಾರು ಎಂದಿಗಿಂತ ಮುಂಚಿತವಾಗಿ ಅಂದರೆ ಮೇ 26 ರಂದೇ ಕೇರಳ ಕರಾವಳಿಯನ್ನು ಪ್ರವೇಶಿಸಲಿದೆ ಎಂದು ಅಂದಾಜಿಸಿತ್ತು. ಇದು ಜನರಲ್ಲಿ ಭಾರೀ ನಿರೀಕ್ಷೆಯನ್ನು ಮೂಡಿಸಿತ್ತು. ಆದರೆ, ಮೇ 26 ರಂದು ಯಾವುದೇ ಮಳೆ ಬಾರದಿದ್ದಾಗ, ಈ ದಿನಾಂಕವನ್ನು ಮೇ 28ಕ್ಕೆ ಮುಂದೂಡಲಾಯಿತು. ತದನಂತರ ವಾಡಿಕೆಯಂತೆ ಜೂನ್ 1ಕ್ಕೆ ಮುಂಗಾರು ಪ್ರವೇಶಿಸಲಿದೆ ಎಂದು ಹೇಳಲಾಗಿತ್ತು. ಆದರೆ, ಇಂದಿಗೂ ಮುಂಗಾರು ಪ್ರವೇಶಿಸದ ಕಾರಣ ಈಗ ಜೂನ್ 3ರ ನಂತರವಷ್ಟೇ ಮುಂಗಾರು ಮಾರುತಗಳು ಕೇರಳ ತೀರಕ್ಕೆ ಅಪ್ಪಳಿಸಲಿವೆ ಎಂದು ಹವಾಮಾನ ಇಲಾಖೆ ಹೇಳಿದೆ.

ಮುಂಗಾರಿಗೆ ಸೈಕ್ಲೋನ್ ಭೀತಿಯೇ ಅಡ್ಡಿ

ಕೇರಳ ಕರಾವಳಿಯಲ್ಲಿ ಮುಂಗಾರು ಆರಂಭವಾಗಿದೆ ಎಂದು ಅಧಿಕೃತವಾಗಿ ಘೋಷಿಸಲು ಹವಾಮಾನ ಇಲಾಖೆಗೆ ಮೂರು ಪ್ರಮುಖ ಅಂಶಗಳು ಹೊಂದಾಣಿಕೆ ಆಗಬೇಕಾಗುತ್ತದೆ. ಕೇರಳದ ಶೇ.60ಕ್ಕೂ ಹೆಚ್ಚು ಹವಾಮಾನ ಕೇಂದ್ರಗಳಲ್ಲಿ ಸತತ ಮಳೆಯಾಗಬೇಕು, ಅರಬ್ಬಿ ಸಮುದ್ರದಲ್ಲಿ ಪಶ್ಚಿಮ ಮಾರುತಗಳು ನಿರ್ದಿಷ್ಟ ವೇಗದಲ್ಲಿ ಬೀಸಬೇಕು ಮತ್ತು ಉಪಗ್ರಹಗಳ ಮೂಲಕ ದಟ್ಟವಾದ ಮೋಡಗಳ ಮುಸುಕು ಪತ್ತೆಯಾಗಬೇಕು. ಸದ್ಯಕ್ಕೆ ಕೇರಳ ಮತ್ತು ಲಕ್ಷದ್ವೀಪದ ಕೆಲವು ಭಾಗಗಳಲ್ಲಿ ಅಲ್ಲಲ್ಲಿ ಚದುರಿದ ಮಳೆಯಾಗುತ್ತಿದ್ದರೂ, ಮಾರುತಗಳ ವೇಗ ತೀರಾ ದುರ್ಬಲವಾಗಿದೆ. ಇದಕ್ಕೆ ಪೂರಕವಾಗಿ ಬಂಗಾಳ ಕೊಲ್ಲಿಯಲ್ಲಿ ಇತ್ತೀಚೆಗೆ ಸೃಷ್ಟಿಯಾದ ಚಂಡಮಾರುತವು (ಸೈಕ್ಲೋನ್) ಮುಂಗಾರು ಮಾರುತಗಳ ದಿಕ್ಕು ಮತ್ತು ವೇಗವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದೆ. ಜೂನ್ 1ರ ನಂತರ ಗಾಳಿಯ ವೇಗ ಹೆಚ್ಚಾಗುವ ನಿರೀಕ್ಷೆ ಇದೆಯಾದರೂ, ಹವಾಮಾನದಲ್ಲಿ ನಿರಂತರ ಏರುಪೇರು ಉಂಟಾಗುತ್ತಿದೆ.

ಎಲ್ ನಿನೋ ಎಫೆಕ್ಟ್: ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆ

ಸಾಮಾನ್ಯವಾಗಿ ಜೂನ್ ಆರಂಭದಲ್ಲಿ ಕೇರಳ ಪ್ರವೇಶಿಸುವ ಮುಂಗಾರು ಜೂನ್ ಅಂತ್ಯ ಅಥವಾ ಜುಲೈ ಮೊದಲ ವಾರದ ವೇಳೆಗೆ ಇಡೀ ದೇಶವನ್ನು ಆವರಿಸುತ್ತದೆ. ಜೂನ್ 8ರ ಒಳಗೆ ಮುಂಗಾರು ಪ್ರವೇಶಿಸಿದರೆ ಅದನ್ನು ತೀರಾ ತಡ ಎಂದು ಪರಿಗಣಿಸಲಾಗುವುದಿಲ್ಲ ಎಂದು ಐಎಂಡಿ ಸ್ಪಷ್ಟಪಡಿಸಿದೆ. ಆದರೆ, ಈಗಾಗಲೇ ದೇಶದ ಬಹುತೇಕ ಭಾಗಗಳು ದಾಖಲೆ ಮಟ್ಟದ ತಾಪಮಾನದಿಂದ ತತ್ತರಿಸುತ್ತಿರುವುದರಿಂದ ಈ ವಿಳಂಬ ಜನರನ್ನು ಕಂಗಾಲು ಮಾಡಿದೆ. ಇದರ ನಡುವೆ, ಪೆಸಿಫಿಕ್ ಮಹಾಸಾಗರದಲ್ಲಿ ಜಾಗತಿಕ ಹವಾಮಾನ ಬದಲಾವಣೆ ತರುವ ‘ಎಲ್ ನಿನೋ’ (El Nino) ಪ್ರಭಾವ ತೀವ್ರಗೊಳ್ಳುತ್ತಿರುವುದು ಆತಂಕವನ್ನು ಇಮ್ಮಡಿಗೊಳಿಸಿದೆ.

ಈ ‘ಎಲ್ ನಿನೋ’ ಎಫೆಕ್ಟ್‌ನಿಂದಾಗಿ 2026ರ ಸಾಲಿನಲ್ಲಿ ಭಾರತದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಏಪ್ರಿಲ್‌ನಲ್ಲಿ ಶೇ.92ರಷ್ಟು ಮಳೆಯಾಗಬಹುದು ಎಂದು ಅಂದಾಜಿಸಲಾಗಿದ್ದರೂ, ಈಗ ಅದನ್ನು ಶೇ.90ಕ್ಕೆ ಇಳಿಸಲಾಗಿದೆ. ವಿಶೇಷವಾಗಿ ಮುಂಗಾರು ಹಂಗಾಮಿನ ದ್ವಿತೀಯಾರ್ಧದಲ್ಲಿ ಅಂದರೆ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಮಧ್ಯ ಹಾಗೂ ದಕ್ಷಿಣ ಭಾರತದಲ್ಲಿ ಮಳೆಯ ಪ್ರಮಾಣ ಗಣನೀಯವಾಗಿ ಕುಸಿಯುವ ಸಾಧ್ಯತೆಯಿದೆ. ಒಟ್ಟಾರೆಯಾಗಿ, ಬಿಸಿಲಿನ ಬೇಗೆಯಿಂದ ಬಳಲುತ್ತಿರುವ ಜನಸಾಮಾನ್ಯರು ಮತ್ತು ಕೃಷಿ ಚಟುವಟಿಕೆ ಆರಂಭಿಸಲು ಕಾಯುತ್ತಿರುವ ರೈತರು ಮಳೆಗಾಗಿ ಇನ್ನೂ ಕೆಲವು ದಿನಗಳ ಕಾಲ ಆಗಸದೆಡೆಗೆ ಮುಖ ಮಾಡಿ ಕಾಯುವುದು ಅನಿವಾರ್ಯವಾಗಿದೆ.

ಇದನ್ನೂ ಓದಿ : ಬಿಜೆಪಿಗೆ ಅಣ್ಣಾಮಲೈ ಗುಡ್‌ಬೈ? ತಲೆಎತ್ತಿದ ಪೋಸ್ಟರ್‌ಗಳು.. ಹೊಸ ಪಕ್ಷದ ಸುಳಿವು!

Tags: IndiaKarnataka News beat
SendShareTweet
Previous Post

ಬಿಜೆಪಿಗೆ ಅಣ್ಣಾಮಲೈ ಗುಡ್‌ಬೈ? ತಲೆಎತ್ತಿದ ಪೋಸ್ಟರ್‌ಗಳು.. ಹೊಸ ಪಕ್ಷದ ಸುಳಿವು!

Next Post

IPL ಗೆಲುವಿನ ಸಂಭ್ರಮ : ಕೋಚ್ ಆಂಡಿ ಫ್ಲವರ್‌ಗೆ ಐಸ್ ವಾಟರ್ ಸ್ನಾನ ಮಾಡಿಸಿದ RCB ಆಟಗಾರರು!

Related Posts

ಹೋಮ್‌ವರ್ಕ್‌ನಲ್ಲಿ ಹಿಂದೂ ವಿದ್ಯಾರ್ಥಿಗೆ ‘ಕಲಿಮಾ’ ಕಲಿಯಲು ಸೂಚನೆ : ಶಾಲೆ ವಿರುದ್ಧ ಪೋಷಕರ ಆಕ್ರೋಶ!
ದೇಶ

ಹೋಮ್‌ವರ್ಕ್‌ನಲ್ಲಿ ಹಿಂದೂ ವಿದ್ಯಾರ್ಥಿಗೆ ‘ಕಲಿಮಾ’ ಕಲಿಯಲು ಸೂಚನೆ : ಶಾಲೆ ವಿರುದ್ಧ ಪೋಷಕರ ಆಕ್ರೋಶ!

ಅಮೆರಿಕ, ಯುರೋಪ್, ಭಾರತದಲ್ಲಿ ಒನ್‌ಪ್ಲಸ್ ವ್ಯವಹಾರ ಸ್ಥಗಿತ? ; ಕಂಪನಿ ನೀಡಿದ ಸ್ಪಷ್ಟನೆ ಏನು?
ವ್ಯಾಪಾರ

ಅಮೆರಿಕ, ಯುರೋಪ್, ಭಾರತದಲ್ಲಿ ಒನ್‌ಪ್ಲಸ್ ವ್ಯವಹಾರ ಸ್ಥಗಿತ? ; ಕಂಪನಿ ನೀಡಿದ ಸ್ಪಷ್ಟನೆ ಏನು?

‘ಗಗನಯಾನ’ ವಿಜ್ಞಾನಿಗಳ ದಿಢೀರ್ ರಾಜೀನಾಮೆ : ಇಸ್ರೋ ನಿಯಮಗಳು ಮತ್ತಷ್ಟು ಕಠಿಣ.. ನಿರ್ಗಮನಕ್ಕೆ ಬ್ರೇಕ್!
ದೇಶ

‘ಗಗನಯಾನ’ ವಿಜ್ಞಾನಿಗಳ ದಿಢೀರ್ ರಾಜೀನಾಮೆ : ಇಸ್ರೋ ನಿಯಮಗಳು ಮತ್ತಷ್ಟು ಕಠಿಣ.. ನಿರ್ಗಮನಕ್ಕೆ ಬ್ರೇಕ್!

‘ಕೊರ್ಬೊ, ಲೊರ್ಬೊ, ಬಚ್ಬೊ’ : ವಯಸ್ಸಿನ ಬಗ್ಗೆ ಟೀಕಿಸಿದ ಬಿಜೆಪಿಗೆ ಮಮತಾ ಬ್ಯಾನರ್ಜಿ ತಿರುಗೇಟು
ದೇಶ

‘ಕೊರ್ಬೊ, ಲೊರ್ಬೊ, ಬಚ್ಬೊ’ : ವಯಸ್ಸಿನ ಬಗ್ಗೆ ಟೀಕಿಸಿದ ಬಿಜೆಪಿಗೆ ಮಮತಾ ಬ್ಯಾನರ್ಜಿ ತಿರುಗೇಟು

ಸೋನಂ ವಾಂಗ್ಚುಕ್‌ರನ್ನು ಕಾಪಾಡಲು ಏನೇನು ಬೇಕೋ ಎಲ್ಲವನ್ನೂ ಮಾಡಿ : ದಿಲ್ಲಿ ಹೈಕೋರ್ಟ್ ಮಹತ್ವದ ಆದೇಶ
ದೇಶ

ಸೋನಂ ವಾಂಗ್ಚುಕ್‌ರನ್ನು ಕಾಪಾಡಲು ಏನೇನು ಬೇಕೋ ಎಲ್ಲವನ್ನೂ ಮಾಡಿ : ದಿಲ್ಲಿ ಹೈಕೋರ್ಟ್ ಮಹತ್ವದ ಆದೇಶ

ಇಂದಿನಿಂದ ಬದಲಾಗಲಿದೆ ನಿಮ್ಮ EPFO ಜಗತ್ತು : ಈ 8 ನಿಯಮ ತಿಳಿದಿದ್ದರೆ ಸಾಕು
ದೇಶ

ಇಂದಿನಿಂದ ಬದಲಾಗಲಿದೆ ನಿಮ್ಮ EPFO ಜಗತ್ತು : ಈ 8 ನಿಯಮ ತಿಳಿದಿದ್ದರೆ ಸಾಕು

Next Post
IPL ಗೆಲುವಿನ ಸಂಭ್ರಮ : ಕೋಚ್ ಆಂಡಿ ಫ್ಲವರ್‌ಗೆ ಐಸ್ ವಾಟರ್ ಸ್ನಾನ ಮಾಡಿಸಿದ RCB ಆಟಗಾರರು!

IPL ಗೆಲುವಿನ ಸಂಭ್ರಮ : ಕೋಚ್ ಆಂಡಿ ಫ್ಲವರ್‌ಗೆ ಐಸ್ ವಾಟರ್ ಸ್ನಾನ ಮಾಡಿಸಿದ RCB ಆಟಗಾರರು!

  • Trending
  • Comments
  • Latest
ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ವಿಜಯ ಪತಾಕೆ ಹಾರಿಸಿದ ವಿಜಯ ಭಾರತಿ ವಿದ್ಯಾರ್ಥಿನಿ!

ಉಡುಪಿ KMCಯಲ್ಲಿ ಬಡವರಿಗಿಲ್ಲ ಆಯುಷ್ಮಾನ್ ಸೌಲಭ್ಯ – ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಯುವ ಮೋರ್ಚಾ!

ಉಡುಪಿ KMCಯಲ್ಲಿ ಬಡವರಿಗಿಲ್ಲ ಆಯುಷ್ಮಾನ್ ಸೌಲಭ್ಯ – ಕ್ರಮಕ್ಕೆ ಆಗ್ರಹಿಸಿದ ಬಿಜೆಪಿ ಯುವ ಮೋರ್ಚಾ!

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಹೈಡ್ರೋವಿಡ್ ಗಾಂಜಾ ಮಾರಾಟಕ್ಕೆ ಯತ್ನ – ಕುಂದಾಪುರ ಕಾಲೇಜಿನ ವಿದ್ಯಾರ್ಥಿನಿ ಬಂಧನ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

N.S ಶಂಕರ್ ಸ್ಮರಣೆ ; ಜು.19ರಂದು ಹಿರಿಯ ಪತ್ರಕರ್ತನಿಗೆ ಭಾವಪೂರ್ಣ ನುಡಿನಮನ!

N.S ಶಂಕರ್ ಸ್ಮರಣೆ ; ಜು.19ರಂದು ಹಿರಿಯ ಪತ್ರಕರ್ತನಿಗೆ ಭಾವಪೂರ್ಣ ನುಡಿನಮನ!

ವಿಶ್ವಕಪ್‌ಗಳಿಗೆ ICCಯ ಮೇಜರ್ ಸರ್ಜರಿ.. ಏಕದಿನಕ್ಕೆ ‘ಸೂಪರ್ 7’, ಟಿ20ಗೆ IPL ಮಾದರಿಯ ಎಲಿಮಿನೇಟರ್!

ವಿಶ್ವಕಪ್‌ಗಳಿಗೆ ICCಯ ಮೇಜರ್ ಸರ್ಜರಿ.. ಏಕದಿನಕ್ಕೆ ‘ಸೂಪರ್ 7’, ಟಿ20ಗೆ IPL ಮಾದರಿಯ ಎಲಿಮಿನೇಟರ್!

ವಿದಾಯದ ಬಳಿಕ ಹೊಸ ಅಧ್ಯಾಯ.. ತವರಿನ ಕ್ಲಬ್ ಡರ್ಹಮ್‌ಗೆ ಮರಳಿದ ಬೆನ್ ಸ್ಟೋಕ್ಸ್!

ವಿದಾಯದ ಬಳಿಕ ಹೊಸ ಅಧ್ಯಾಯ.. ತವರಿನ ಕ್ಲಬ್ ಡರ್ಹಮ್‌ಗೆ ಮರಳಿದ ಬೆನ್ ಸ್ಟೋಕ್ಸ್!

ಹೋಮ್‌ವರ್ಕ್‌ನಲ್ಲಿ ಹಿಂದೂ ವಿದ್ಯಾರ್ಥಿಗೆ ‘ಕಲಿಮಾ’ ಕಲಿಯಲು ಸೂಚನೆ : ಶಾಲೆ ವಿರುದ್ಧ ಪೋಷಕರ ಆಕ್ರೋಶ!

ಹೋಮ್‌ವರ್ಕ್‌ನಲ್ಲಿ ಹಿಂದೂ ವಿದ್ಯಾರ್ಥಿಗೆ ‘ಕಲಿಮಾ’ ಕಲಿಯಲು ಸೂಚನೆ : ಶಾಲೆ ವಿರುದ್ಧ ಪೋಷಕರ ಆಕ್ರೋಶ!

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

N.S ಶಂಕರ್ ಸ್ಮರಣೆ ; ಜು.19ರಂದು ಹಿರಿಯ ಪತ್ರಕರ್ತನಿಗೆ ಭಾವಪೂರ್ಣ ನುಡಿನಮನ!

N.S ಶಂಕರ್ ಸ್ಮರಣೆ ; ಜು.19ರಂದು ಹಿರಿಯ ಪತ್ರಕರ್ತನಿಗೆ ಭಾವಪೂರ್ಣ ನುಡಿನಮನ!

ವಿಶ್ವಕಪ್‌ಗಳಿಗೆ ICCಯ ಮೇಜರ್ ಸರ್ಜರಿ.. ಏಕದಿನಕ್ಕೆ ‘ಸೂಪರ್ 7’, ಟಿ20ಗೆ IPL ಮಾದರಿಯ ಎಲಿಮಿನೇಟರ್!

ವಿಶ್ವಕಪ್‌ಗಳಿಗೆ ICCಯ ಮೇಜರ್ ಸರ್ಜರಿ.. ಏಕದಿನಕ್ಕೆ ‘ಸೂಪರ್ 7’, ಟಿ20ಗೆ IPL ಮಾದರಿಯ ಎಲಿಮಿನೇಟರ್!

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat