ಬೆಂಗಳೂರು: ಏರ್ಪೋಟ್ ನಿಂದ ಹೊರಗಡೆ ಬರುತ್ತಿದ್ದ ಪ್ರಯಾಣಿಕನ ಟ್ರಾಲಿ ಬ್ಯಾಗ್ ನಲ್ಲಿ ಕೆಜಿ ಕೆಜಿ ಚಿನ್ನ ಪತ್ತೆಯಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನೊರ್ವ ಟ್ರಾಲಿ ತಳ್ಳಿಕೊಂಡು ಚೆಕಿಂಗ್ ಕಡೆ ಬರುವಾಗ ಟ್ರಾಲಿ ಬ್ಯಾಗ್ ನಿಂದ ಚಿನ್ನದ ಬ್ಯಾಗ್ ಹೊರಗಡೆ ಬಿದ್ದಿದೆ. ತನ್ನ ಟ್ರಾಲಿಯಲ್ಲಿ ಚಿನ್ನದ ಬ್ಯಾಗ್ ಕಂಡು ಕಂಗಾಲಾದ ಪ್ರಯಾಣಿಕ ಕೂಡಲೆ ಚಿನ್ನದ ಬ್ಯಾಗ್ ಸಮೇತ ಏರ್ಪೋಟ್ ಭದ್ರತಾ ಪಡೆಗೆ ಮಾಹಿತಿ ನೀಡಿದ್ದಾನೆ.

ದುಬೈನಿಂದ ಬಂದಿದ್ದ ಕೋ ಪ್ಯಾಸೆಂಜರೊಬ್ಬ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಹಾಕಿಕೊಳ್ಳುವ ಭಯದಿಂದ ಬರೋಬ್ಬರಿ 3.5 ಕೆಜಿ ಚಿನ್ನ ಬಿಸ್ಕೆಟುಗಳಿದ್ದ ಬ್ಯಾಗ್ ಅನ್ನು ಬೇರೆಯವರ ಲಗೇಜ್ ಟ್ರಾಲಿಗೆ ಹಾಕಿ ಪರಾರಿ ಆಗಿದ್ದಾನೆ.
ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಕೋಟಿ ಕೋಟಿ ಬೆಲೆ ಬಾಳುವ 3.5 ಕೆಜಿ ಚಿನ್ನ ಪತ್ತೆಯಾಗಿದ್ದು, ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕನಿಂದ ಮಾಹಿತಿ ಪಡೆದುಕೊಂಡು ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದಾರೆ.
ಯಾರು ಚಿನ್ನದ ಬ್ಯಾಗ್ ಇಟ್ಟಿದ್ದು ಯಾವ ಪ್ರಯಾಣಿಕ ಎಂಬುದರ ಬಗ್ಗೆ ಪರಿಶೀಲನೆ ನಡೆಸಿದಾಗ ಮೆಲ್ನೋಟಕ್ಕೆ ದುಬೈ ನಿಂದ ಬಂದಿದ್ದ ವ್ಯಕ್ತಿಯೆ ಚಿನ್ನ ಬಿಟ್ಟು ಪರಾರಿ ಆಗಿರುವ ಶಂಕೆ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ.



















