ಬೆಂಗಳೂರು : ಸಿನಿಮಾ, ಕೃತಕ ಬುದ್ಧಿಮತ್ತೆ (AI) ಹಾಗೂ ತಂತ್ರಜ್ಞಾನವನ್ನು ಒಂದೇ ವೇದಿಕೆಯಲ್ಲಿ ಬೆಸೆಯುವ ಹೊಸ ಪ್ರಯತ್ನವಾಗಿ ಮಹೇಶ್ ರೆಡ್ಡಿ ಅವರ BLAZT.AI ಸೆಪ್ಟೆಂಬರ್ 27ರಂದು ಅಧಿಕೃತವಾಗಿ ಲಾಂಚ್ ಆಗಿದೆ. ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಹೊಸ ಸಂಸ್ಥೆಗೆ ಚಾಲನೆ ನೀಡಲಾಗಿದೆ. ‘Dream it. Visualize it. BLAZT it.’ ಎಂಬ ಪರಿಕಲ್ಪನೆಯೊಂದಿಗೆ ಸಿನಿಮಾ ನಿರ್ಮಾಣಕ್ಕೂ ಮುನ್ನವೇ ಕಥೆಯನ್ನು ದೃಶ್ಯರೂಪದಲ್ಲಿ ಕಲ್ಪಿಸಲು, ಯೋಜಿಸಲು ಮತ್ತು ಅಭಿವೃದ್ಧಿಪಡಿಸಲು ಈ ಸಂಸ್ಥೆ ಕಾರ್ಯನಿರ್ವಹಿಸಲಿದೆ.

AI Creative Studio ಆಗಿ ರೂಪುಗೊಂಡಿರುವ BLAZT.AI, ಫಿಲ್ಮ್ ಪ್ರೀ-ಪ್ರೊಡಕ್ಷನ್, ಪ್ರಾಜೆಕ್ಟ್ ಡೆವಲಪ್‌ಮೆಂಟ್, ಸಿನಿಮಾ ಪ್ರಚಾರ ಹಾಗೂ AI Advertising ಸೇರಿದಂತೆ ಹಲವು ಸೇವೆಗಳನ್ನು ನೀಡಲಿದೆ. ಪಾತ್ರಗಳು, ಕಾಸ್ಟ್ಯೂಮ್‌ಗಳು, ಪ್ರಾಪ್ಸ್, ಹೊಸ ಲೋಕಗಳು, ಲೊಕೇಷನ್ ಕಾನ್ಸೆಪ್ಟ್, ಆರ್ಟ್ ಡೈರೆಕ್ಷನ್, ಬಣ್ಣ ಮತ್ತು ವಿಸ್ಯುವಲ್ ಟೋನ್ ಸೇರಿದಂತೆ ಕಥೆಯ ದೃಶ್ಯ ಭಾಷೆಯನ್ನು ಶೂಟಿಂಗ್‌ಗೂ ಮುನ್ನವೇ ರೂಪಿಸಲು ನೆರವಾಗಲಿದೆ.

‘From Script to Screen’ ಕಾರ್ಯವಿಧಾನದಡಿ ಸ್ಕ್ರಿಪ್ಟ್ ವಿಶ್ಲೇಷಣೆ, ಸೀನ್ ಬ್ರೇಕ್‌ಅಪ್, ಸ್ಟೋರಿಬೋರ್ಡ್, ವಿಸ್ಯುವಲ್ ರೆಫರೆನ್ಸ್, AI ಹಾಗೂ ಮ್ಯಾನುಯಲ್ ಕಾನ್ಸೆಪ್ಟ್ ಆರ್ಟ್, ಪ್ರೀವಿಸ್, ಅನಿಮ್ಯಾಟಿಕ್ಸ್ ಮತ್ತು VFX ಕಾನ್ಸೆಪ್ಟ್‌ಗಳನ್ನು ಸಿದ್ಧಪಡಿಸುವ ವ್ಯವಸ್ಥೆ ಇರಲಿದೆ. ಶಾಟ್ ಡಿವಿಷನ್, ಕ್ಯಾಮೆರಾ ಮತ್ತು ಲೆನ್ಸ್ ಆಯ್ಕೆ, VFX ಪ್ಲಾನಿಂಗ್, ಲೊಕೇಷನ್, ಕಾಸ್ಟ್-ಕ್ರೂ, ಶೆಡ್ಯೂಲ್, ಬಜೆಟ್ ಹಾಗೂ ರಿಸ್ಕ್ ಪ್ಲಾನಿಂಗ್‌ನಂತಹ ತಾಂತ್ರಿಕ ಅಂಶಗಳನ್ನೂ ಮುಂಚಿತವಾಗಿ ಯೋಜಿಸಲು ಇದು ಸಹಾಯ ಮಾಡಲಿದೆ.

ಹಾಗೆಯೇ ಆ್ಯಕ್ಷನ್ ಮತ್ತು ಸ್ಟಂಟ್ ಪ್ರೀವಿಸ್, VFX ಹೆಚ್ಚು ಅಗತ್ಯವಿರುವ ದೃಶ್ಯಗಳು, ಫ್ಯಾಂಟಸಿ ಮತ್ತು ಪೌರಾಣಿಕ ಕಥೆಗಳು, ಟೆಕ್ನಿಕಲ್ ಸಿಮ್ಯುಲೇಷನ್, ಕ್ಯಾಮೆರಾ ಮೂವ್‌ಮೆಂಟ್ ಮತ್ತು ಬ್ಲಾಕಿಂಗ್‌ನಂತಹ ಸಂಕೀರ್ಣ ದೃಶ್ಯಗಳನ್ನು ಶೂಟಿಂಗ್‌ಗೂ ಮುನ್ನವೇ ದೃಶ್ಯೀಕರಿಸುವ ಅವಕಾಶವೂ ಇರಲಿದೆ. ಇದರ ಜತೆಗೆ ನಿರ್ದೇಶಕರ ವಿಸನ್ ಡೆಕ್, ನಿರ್ಮಾಪಕ/ಹೂಡಿಕೆದಾರರ ಡೆಕ್, ಲುಕ್ ಡೆವಲಪ್‌ಮೆಂಟ್ ಡೆಕ್, ಪ್ರೀವಿಸ್ ಮತ್ತು VFX ಡೆಕ್, ಕಾಸ್ಟ್ಯೂಮ್-ಸೆಟ್ ಡೆಕ್ ಹಾಗೂ ಲೊಕೇಷನ್ ಪ್ರೆಸೆಂಟೇಷನ್‌ಗಳನ್ನೂ ಸಿದ್ಧಪಡಿಸುವ ಸೇವೆಗಳನ್ನು BLAZT.AI ಒದಗಿಸಲಿದೆ.
ಸಿನಿಮಾ ನಿರ್ಮಾಣದ ಬಳಿಕದ ಪ್ರಚಾರಕ್ಕೂ ಸಂಸ್ಥೆ ಸೇವೆ ನೀಡಲಿದ್ದು, ಟೀಸರ್, ಟ್ರೇಲರ್, ಪೋಸ್ಟರ್, ಮೋಶನ್ ಪೋಸ್ಟರ್, ಕ್ಯಾರೆಕ್ಟರ್ ರಿವೀಲ್, ಹಾಡು ಮತ್ತು ಆಲ್ಬಂ ಪ್ರೋಮೋ, ಡಿಜಿಟಲ್ ಹಾಗೂ ಸಾಮಾಜಿಕ ಜಾಲತಾಣಗಳ ಕ್ಯಾಂಪೇನ್‌ಗಳನ್ನು ರೂಪಿಸಲಿದೆ. ಇದೇ ವೇಳೆ AI Advertising ವಿಭಾಗದಲ್ಲಿ ಜಾಹೀರಾತುಗಳು, ಬ್ರ್ಯಾಂಡ್ ಫಿಲ್ಮ್‌ಗಳು ಹಾಗೂ ಡಿಜಿಟಲ್ ಕಂಟೆಂಟ್‌ಗಳನ್ನೂ ನಿರ್ಮಿಸುವ ಯೋಜನೆಯನ್ನು BLAZT.AI ಹೊಂದಿದೆ.
ಇದನ್ನೂ ಓದಿ : ಅಕ್ಟೋಬರ್ 1ರಿಂದ ಹಲವು ಹಣಕಾಸು ನಿಯಮಗಳ ಬದಲಾವಣೆ : ಜನರಿಗೆ ಲಾಭವೋ? ಹೊರೆಯೋ?


















