ಮೈಸೂರು : ಕಬ್ಬಿಣದ ರಾಡ್ ಮತ್ತು ಡ್ರ್ಯಾಗರ್ ಹಿಡಿದು ಖದೀಮರು ತಡರಾತ್ರಿ ಮಧ್ಯದಂಗಡಿ ದೋಚಿರುವ ಘಟನೆ ನಂಜನಗೂಡು ತಾಲೂಕಿನ ತಗಡೂರು ಗ್ರಾಮದಲ್ಲಿ ನಡೆದಿದೆ.
ತಗಡೂರು ಗ್ರಾಮದ ಸಂತೋಷ್ ವೈನ್ಸ್ ಮಧ್ಯದ ಅಂಗಡಿಯ ಬಾಗಿಲು ಮೇಟಿ ಮೂರು ಮಂದಿ ಖದೀಮರು ದಾಂದಲೆ ನಡೆಸಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಅಂಗಡಿಯ ಗಲ್ಲಾ ಪೆಟ್ಟಿಗೆಯಲ್ಲಿದ್ದ ಹಣವನ್ನು ದೋಚಿದ ಬಳಿಕ ಸಮೀಪದ ಪೆಟ್ಟಿ ಅಂಗಡಿಯನ್ನು ದೋಚಲು ಮುಂದಾದ ಕಳ್ಳರು, ಪೆಟ್ಟಿ ಅಂಗಡಿಯ ಒಳಭಾಗದಲ್ಲಿ ಮಲಗಿದ್ದ ವ್ಯಕ್ತಿಯನ್ನು ನೋಡಿ ಹಲ್ಲೆ ಮಾಡಲೆತ್ನಿಸಿದ್ದಾರೆ. ಬಳಿಕ ಕಳ್ಳರನ್ನು ನೋಡಿದ ಪಟ್ಟಿ ಅಂಗಡಿ ಮಾಲೀಕ ರವಿ ಚೀರಾಟ ನಡೆಸಿ ಜೀವ ಬದುಕಿಸಿಕೊಂಡಿದ್ದಾನೆ.
ಈ ಸಂಬಂಧ ಸ್ಥಳಕ್ಕೆ ದೊಡ್ಡ ಕವಲಂದೆ ಪೊಲೀಸರು ಭೇಟಿ ನೀಡಿ ಪರಿಶೀಲಸಿ, ದೂರು ದಾಖಲಿಸಿಕೊಂಡಿದ್ದಾರೆ.



















