ಹೊಸಪೇಟೆ : ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಆದರೆ ಹೊಸಪೇಟೆಯಲ್ಲಿ ಬಂದ್‌ಗೆ ಯಾವುದೇ ರೀತಿಯ ಬೆಂಬಲ ವ್ಯಕ್ತವಾಗಿಲ್ಲ.
ಹೊಸಪೇಟೆಯಲ್ಲಿ ಬೆಳಗ್ಗೆಯಿಂದಲೇ ಸಾರಿಗೆ ಬಸ್‌ಗಳ ಸಂಚಾರ ಎಂದಿನಂತೆ ಮುಂದುವರಿದಿದೆ. ಬಸ್‌ಗಳು, ಆಟೋಗಳು ಸೇರಿದಂತೆ ಎಲ್ಲಾ ರೀತಿಯ ವಾಹನಗಳು ಎಂದಿನಂತೆ ಓಡಾಟ ನಡೆಸುತ್ತಿದ್ದು, ಜನರ ಸಂಚಾರವೂ ಸಹಜವಾಗಿದೆ.
ಶಾಲಾ-ಕಾಲೇಜುಗಳು ಹಾಗೂ ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಹೋಟೆಲ್‌ಗಳು, ಅಂಗಡಿ-ಮುಂಗಟ್ಟುಗಳೂ ತೆರೆದಿದ್ದು, ವ್ಯಾಪಾರ ವಹಿವಾಟು ಸಾಮಾನ್ಯವಾಗಿದೆ.
ನಗರದ ಪ್ರಮುಖ ರಸ್ತೆಗಳು ಹಾಗೂ ಪ್ರದೇಶಗಳಲ್ಲಿ ವಾಹನ ದಟ್ಟಣೆ ಎಂದಿನಂತೆಯೇ ಕಂಡುಬಂದಿದೆ. ಬಂದ್‌ನ ಯಾವುದೇ ಪರಿಣಾಮ ಹೊಸಪೇಟೆಯ ಜನಜೀವನದ ಮೇಲೆ ಕಂಡುಬಂದಿಲ್ಲ.
ಕಾವೇರಿ ನೀರು ತಮಿಳುನಾಡಿಗೆ ಹರಿಸುವುದನ್ನು ವಿರೋಧಿಸಿ ರಾಜ್ಯಾದ್ಯಂತ ಬಂದ್‌ಗೆ ಕರೆ ನೀಡಲಾಗಿದ್ದರೂ, ಹೊಸಪೇಟೆಯಲ್ಲಿ ಸಾರಿಗೆ, ವ್ಯಾಪಾರ, ಶಿಕ್ಷಣ ಸೇರಿದಂತೆ ಎಲ್ಲಾ ಚಟುವಟಿಕೆಗಳು ಸಹಜವಾಗಿಯೇ ನಡೆಯುತ್ತಿವೆ.
ಇದನ್ನೂ ಓದಿ : ಇಂದು ಅಖಂಡ ಕರ್ನಾಟಕ ಬಂದ್ ; ಬೆಂಗಳೂರಲ್ಲಿ ನೀರಸ ಪ್ರತಿಕ್ರಿಯೆ.. ಎಂದಿನಂತೆ ಬಸ್ ಸಂಚಾರ!



















