ಕನ್ನಡಿಗ ಹಾಗೂ ಕ್ರಿಕೆಟಿಗ ಕೆಎಲ್ ರಾಹುಲ್ ತಂದೆಯಾಗುವ ಖುಷಿಯಲ್ಲಿದ್ದಾರೆ.
ಇತ್ತೀಚೆಗೆ ಫಾರ್ಮ್ ಕಳೆದುಕೊಂಡು ಆತಂಕದಲ್ಲಿರುವ ರಾಹುಲ್ ಗೆ ಈಗ ಈ ಖುಷಿ ಹೆಚ್ಚು ಸಂತಸ ತಂದಿದೆ. ರಾಹುಲ್ ಹಾಗೂ ಬಾಲಿವುಡ್ ನಟಿ ಆಥಿಯಾ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಈ ಜೋಡಿ ಜನವರಿಯಲ್ಲಿ ಅದ್ಧೂರಿಯಾಗಿ ವಿವಾಹವಾಗಿತ್ತು. ಈಗ ಅಥಿಯಾ ಶೆಟ್ಟಿ ಗರ್ಭಿಣಿ ಎನ್ನಲಾಗಿದೆ. ಹೀಗಾಗಿ ತಾವು ಮಗುವನ್ನು ನಿರೀಕ್ಷೆ ಮಾಡುತ್ತಿರುವುದಾಗಿ ಜೋಡಿ ಹೇಳಿದೆ. ‘ದೇವರ ಸುಂದರ ಆಶೀರ್ವಾದ 2025ಕ್ಕೆ ಬರಲಿದೆ’ ಎಂದು ಇನ್ ಸ್ಟಾಗ್ರಾಂನಲ್ಲಿ ಈ ಜೋಡಿ ಪೋಸ್ಟ್ ಮಾಡಿ ಸಂತಸ ಹಂಚಿಕೊಂಡಿದೆ.
ಆಥಿಯಾ ಶೆಟ್ಟಿ ಮದುವೆಗೂ ಮುನ್ನ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ, ಮದುವೆಯ ನಂತರ ಅವರಿಗೆ ಅವಕಾಶಗಳು ಬಂದಿಲ್ಲ. 2019 ರಲ್ಲಿ ಅವರು ನಟಿಸಿದ ಕೊನೆಯ ಸಿನಿಮಾ ಬಿಡುಗಡೆ ಆಗಿತ್ತು. ಮದುವೆ ಆದ ಬಳಿಕವಂತೂ ಸಿನಿಮಾಗಳಿಂದಲೂ ಸಂಪೂರ್ಣ ದೂರ ಉಳಿದಿದ್ದಾರೆ.


















