ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ

ಪ್ರಧಾನ ಸಂಪಾದಕರು

newsbeatkarnataka@gmail.com

  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
Karnataka News Beat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ
No Result
View All Result
ಕರ್ನಾಟಕ ನ್ಯೂಸ್ ಬೀಟ್

ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು

No Result
View All Result
Home ವಿದೇಶ

ಹೊರ್ಮುಜ್ ಜಲಸಂಧಿಯಲ್ಲಿ ಮುಸುಕುಧಾರಿ ಇರಾನ್ ಸೈನಿಕರು 2 ಬೃಹತ್ ನೌಕೆಗಳನ್ನು ವಶಕ್ಕೆ ಪಡೆದಿದ್ದು ಹೇಗೆ?

April 23, 2026
Share on WhatsappShare on FacebookShare on Twitter

ಟೆಹ್ರಾನ್ : ಅಮೆರಿಕ-ಇಸ್ರೇಲ್ ಕದನ ವಿರಾಮವನ್ನು ವಿಸ್ತರಣೆ ಮಾಡಿರುವುದಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ಘೋಷಿಸಿದ ಕೆಲವೇ ಹೊತ್ತಲ್ಲಿ ಬುಧವಾರ ಹೊರ್ಮುಜ್ ಜಲಸಂಧಿಯ ಮೂಲಕ ಸಾಗುತ್ತಿದ್ದ ಎರಡು ಬೃಹತ್ ಸರಕು ಸಾಗಣೆ ಹಡಗುಗಳ ಮೇಲೆ ಗುಂಡಿನ ದಾಳಿ ನಡೆಸಿದ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), ಆ ಹಡಗುಗಳನ್ನು ತನ್ನ ವಶಕ್ಕೆ ಪಡೆದುಕೊಂಡಿತ್ತು. ಫೆಬ್ರವರಿಯಲ್ಲಿ ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಯುದ್ಧ ಆರಂಭವಾದ ಬಳಿಕ ಕಡಲಿನಲ್ಲಿ ನಡೆದ ಮೊದಲ ಅತಿದೊಡ್ಡ ಕಾರ್ಯಾಚರಣೆ ಇದಾಗಿತ್ತು. ತನ್ನ ನೌಕೆಯನ್ನು ಅಮೆರಿಕ ವಶಕ್ಕೆ ಪಡೆದಿದ್ದಕ್ಕೆ ಪ್ರತೀಕಾರವಾಗಿ ಇರಾನ್ ಈ ಕ್ರಮ ಕೈಗೊಂಡಿದ್ದು, ಈ ಕಾರ್ಯಾಚರಣೆಯ ವಿವರಗಳು ಇದೀಗ ಬಹಿರಂಗಗೊಂಡಿದೆ.

ದಾಳಿ ನಡೆದಿದ್ದು ಹೇಗೆ?

ಇರಾನ್‌ನ ಸರ್ಕಾರಿ ವಾಹಿನಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ, ಮುಸುಕುಗಳನ್ನು ಧರಿಸಿದ ಶಸ್ತ್ರಸಜ್ಜಿತ ಕಮಾಂಡೋಗಳು ಹಡಗುಗಳನ್ನು ಪ್ರವೇಶಿಸುತ್ತಿರುವ ದೃಶ್ಯಗಳು ಸೆರೆಯಾಗಿವೆ. ವಶಪಡಿಸಿಕೊಂಡ ಹಡಗುಗಳನ್ನು ‘ಎಂಎಸ್‌ಸಿ ಫ್ರಾನ್ಸೆಸ್ಕಾ’ (MSC Francesca) ಮತ್ತು ‘ಎಪಾಮಿನೋಂಡಾಸ್’ (Epaminondas) ಎಂದು ಗುರುತಿಸಲಾಗಿದೆ.

ಈ ಹಡಗುಗಳು ಸೂಕ್ತ ಅನುಮತಿಯಿಲ್ಲದೆ ಸಂಚರಿಸುತ್ತಿದ್ದವು ಮತ್ತು ಇರಾನ್‌ನ ನೌಕಾಯಾನ ವ್ಯವಸ್ಥೆಯನ್ನು ತಿರುಚಲು ಯತ್ನಿಸುತ್ತಿದ್ದವು ಎಂದು ಐಆರ್‌ಜಿಸಿ ಗಂಭೀರ ಆರೋಪ ಮಾಡಿದೆ. ಜಲಸಂಧಿಯಲ್ಲಿನ ಭದ್ರತೆ ಮತ್ತು ಶಿಸ್ತಿಗೆ ಭಂಗ ತಂದರೆ ಅದು ನಮ್ಮ ಪಾಲಿಗೆ ‘ರೆಡ್ ಲೈನ್’ (ಕೆಂಪು ಗೆರೆ) ಇದ್ದಂತೆ ಎಂದು ಇರಾನ್‌ನ ಅರೆ-ಸರ್ಕಾರಿ ಸುದ್ದಿ ಸಂಸ್ಥೆ ‘ತಸ್ನೀಮ್’ ವರದಿ ಮಾಡಿದೆ.

ಗುಂಡಿನ ದಾಳಿಗೆ ತುತ್ತಾದ ಹಡಗುಗಳು

ಗ್ರೀಕ್ ನಿರ್ವಹಣೆಯ, ಲೈಬೀರಿಯಾ ಧ್ವಜ ಹೊತ್ತಿದ್ದ ‘ಎಪಾಮಿನೋಂಡಾಸ್’ ಹಡಗಿನ ಮೇಲೆ ಒಮಾನ್‌ನ ವಾಯುವ್ಯಕ್ಕೆ 20 ನಾಟಿಕಲ್ ಮೈಲಿ ದೂರದಲ್ಲಿ ದಾಳಿ ನಡೆದಿದೆ. ಇರಾನ್‌ನ ಗನ್‌ಬೋಟ್‌ನಿಂದ ಹಾರಿಸಲಾದ ಗುಂಡುಗಳು ಮತ್ತು ರಾಕೆಟ್ ಚಾಲಿತ ಗ್ರೆನೇಡ್‌ಗಳಿಂದ (RPG) ಹಡಗಿನ ಮುಂಭಾಗಕ್ಕೆ ಹಾನಿಯಾಗಿದೆ. ಈ ಹಡಗಿನಲ್ಲಿ ಉಕ್ರೇನ್ ಹಾಗೂ ಫಿಲಿಪೈನ್ಸ್ ಮೂಲದ 21 ಮಂದಿ ಸಿಬ್ಬಂದಿ ಇದ್ದು, ಹಡಗನ್ನು ಬಂದರ್ ಅಬ್ಬಾಸ್ ಕಡೆಗೆ ಕೊಂಡೊಯ್ಯಲಾಗಿದೆ ಎಂದು ಕಡಲ ಭದ್ರತಾ ಮೂಲಗಳು ತಿಳಿಸಿವೆ.

ಪನಾಮಾ ಧ್ವಜವಿದ್ದ ‘ಎಂಎಸ್‌ಸಿ ಫ್ರಾನ್ಸೆಸ್ಕಾ’ ಹಡಗಿನ ಮೇಲೂ ಇರಾನ್‌ನ ಪಶ್ಚಿಮಕ್ಕೆ 8 ನಾಟಿಕಲ್ ಮೈಲಿ ದೂರದಲ್ಲಿ ಗುಂಡಿನ ದಾಳಿ ನಡೆದಿದ್ದು, ಅದೃಷ್ಟವಶಾತ್ ಹಡಗಿಗೆ ಯಾವುದೇ ಹಾನಿಯಾಗಿಲ್ಲ. ಅದೇ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಲೈಬೀರಿಯಾದ ಮತ್ತೊಂದು ಹಡಗು ‘ಯುಫೋರಿಯಾ’ ಮೇಲೂ ಗುಂಡಿನ ದಾಳಿ ನಡೆದಿದ್ದರೂ, ಅದು ಸುರಕ್ಷಿತವಾಗಿ ಯುಎಇಯ ಫುಜೈರಾ ಕಡೆಗೆ ಪ್ರಯಾಣ ಬೆಳೆಸಿದೆ. ಗುಂಡಿನ ದಾಳಿ ನಡೆಸಿದ ಬಳಿಕ ಈ ಹಡುಗಗಳ ಒಳಕ್ಕೆ ಐಆರ್‌ಜಿಸಿ ಪಡೆಗಳ ಮುಸುಕುಧಾರಿ ಯೋಧರು ನುಗ್ಗಿ, ನೌಕೆಗಳನ್ನು ತಮ್ಮ ಸುಪರ್ದಿಗೆ ಪಡೆದಿದ್ದಾರೆ. ಜೊತೆಗೆ ಅದರಲ್ಲಿದ್ದವರನ್ನು ಒತ್ತೆಯಲ್ಲಿರಿಸಿಕೊಂಡಿದ್ದಾರೆ.

ಸಿಬ್ಬಂದಿ ಸುರಕ್ಷಿತ, ಮುಂದುವರಿದ ಮಾತುಕತೆ

ವಶಪಡಿಸಿಕೊಳ್ಳಲಾಗಿರುವ ಎಂಎಸ್‌ಸಿ ಫ್ರಾನ್ಸೆಸ್ಕಾ ಹಡಗಿನಲ್ಲಿರುವ ನಾಲ್ವರು ಮಾಂಟೆನೆಗ್ರೊ ದೇಶದ ನಾವಿಕರು ಸೇರಿದಂತೆ ಎಲ್ಲ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಆ ದೇಶದ ಕಡಲ ವ್ಯವಹಾರಗಳ ಸಚಿವ ಫಿಲಿಪ್ ರಾಡುಲೋವಿಕ್ ಸ್ಪಷ್ಟಪಡಿಸಿದ್ದಾರೆ. ಹಡಗು ಕಂಪನಿ ಹಾಗೂ ಇರಾನ್ ಅಧಿಕಾರಿಗಳ ನಡುವೆ ಮಾತುಕತೆ ಮುಂದುವರಿದಿದೆ ಎಂದು ಅವರು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ. ಎಪಾಮಿನೋಂಡಾಸ್ ಹಡಗಿನ ನಿರ್ವಾಹಕ ಕಂಪನಿ ಟೆಕ್ನೋಮರ್ ಶಿಪ್ಪಿಂಗ್ ಇಂಕ್ ಕೂಡ ದಾಳಿಯನ್ನು ಖಚಿತಪಡಿಸಿದ್ದು, ಸಿಬ್ಬಂದಿಯ ಸುರಕ್ಷತೆಗೆ ಮೊದಲ ಆದ್ಯತೆ ನೀಡಿರುವುದಾಗಿ ಹಾಗೂ ಬಿಡುಗಡೆಗಾಗಿ ಸಂಬಂಧಪಟ್ಟವರೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ತಿಳಿಸಿದೆ.

ಜಲಸಂಧಿಯಲ್ಲಿ ಅಸ್ತವ್ಯಸ್ತಗೊಂಡ ಸಂಚಾರ

ಕಳೆದ ಕೆಲವು ವಾರಗಳಿಂದ ಅಮೆರಿಕ ಮತ್ತು ಇರಾನ್ ನಡುವಿನ ಬಿಕ್ಕಟ್ಟು ಉಲ್ಬಣಗೊಂಡಿದ್ದು, ಅಮೆರಿಕವು ಇರಾನ್ ಹಡಗುಗಳ ಸಂಚಾರವನ್ನು ನಿರ್ಬಂಧಿಸಲು ಆರಂಭಿಸಿದೆ. ಇದರ ಬೆನ್ನಲ್ಲೇ ಇರಾನ್ ಕೂಡ ತನ್ನ ಕಡಲ ಗಡಿಯಲ್ಲಿ ಕಟ್ಟೆಚ್ಚರ ವಹಿಸಿದೆ. ಇದರ ಪರಿಣಾಮವಾಗಿ ಪ್ರತಿದಿನ ಸುಮಾರು 130 ಹಡಗುಗಳು ಸಂಚರಿಸುತ್ತಿದ್ದ ಹೊರ್ಮುಜ್ ಜಲಸಂಧಿಯಲ್ಲಿ ಇದೀಗ ಬೆರಳೆಣಿಕೆಯಷ್ಟು ಹಡಗುಗಳು ಮಾತ್ರ ಓಡಾಡುತ್ತಿವೆ. 2024ರಲ್ಲಿ ಎಂಎಸ್‌ಸಿ ಏರೀಸ್ (MSC Aries) ಕಂಟೈನರ್ ಹಡಗನ್ನು ವಶಪಡಿಸಿಕೊಂಡ ಬಳಿಕ ಇರಾನ್ ನಡೆಸಿದ ಮೊದಲ ಹೈಜಾಕ್ ಕಾರ್ಯಾಚರಣೆ ಇದಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಇದನ್ನೂ ಓದಿ : SSLC ಪರೀಕ್ಷೆಯಲ್ಲಿ ರಾಜ್ಯಕ್ಕೆ 7 ಮಂದಿ ಪ್ರಥಮ.. 625ಕ್ಕೆ 625 ಅಂಕ ಪಡೆದ ವಿದ್ಯಾರ್ಥಿಗಳು ಇವರೇ ನೋಡಿ!

Tags: Karnataka News beat
SendShareTweet
Previous Post

ಐಪಿಎಲ್​ನಲ್ಲಿ ಹೊಸ ಮೈಲಿಗಲ್ಲು ನೆಟ್ಟ ವೈಭವ್ ಸೂರ್ಯವಂಶಿ : ಕೊಹ್ಲಿ, ರೋಹಿತ್ ದಾಖಲೆ ಉಡೀಸ್!

Next Post

ರಥದ ಚಕ್ರಕ್ಕೆ ಸಿಲುಕಿ ವ್ಯಕ್ತಿಯ ಎರಡೂ ಕಾಲು ಕಟ್ – ಮೂವರಿಗೆ ಗಂಭೀರ ಗಾಯ!

Related Posts

ಭಾರತ-ನ್ಯೂಜಿಲೆಂಡ್ ನಡುವೆ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದ : ಇಂದಿನಿಂದಲೇ 8,000ಕ್ಕೂ ಹೆಚ್ಚು ಭಾರತೀಯ ಉತ್ಪನ್ನಗಳಿಗೆ ತೆರಿಗೆ ಮುಕ್ತ ಪ್ರವೇಶ!
ವಿದೇಶ

ಭಾರತ-ನ್ಯೂಜಿಲೆಂಡ್ ನಡುವೆ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದ : ಇಂದಿನಿಂದಲೇ 8,000ಕ್ಕೂ ಹೆಚ್ಚು ಭಾರತೀಯ ಉತ್ಪನ್ನಗಳಿಗೆ ತೆರಿಗೆ ಮುಕ್ತ ಪ್ರವೇಶ!

ಪಾಕಿಸ್ತಾನದಲ್ಲಿ ಅನಾಮಧೇಯ ವ್ಯಕ್ತಿಗಳಿಂದ ಹಫೀಜ್ ಸಯೀದ್ ಆಪ್ತ, ಲಷ್ಕರ್ ಕಮಾಂಡರ್ ಶೇಖ್ ಯೂಸುಫ್ ಅಫ್ರಿದಿ ಹತ್ಯೆ!
ವಿದೇಶ

ಪಾಕಿಸ್ತಾನದಲ್ಲಿ ಅನಾಮಧೇಯ ವ್ಯಕ್ತಿಗಳಿಂದ ಹಫೀಜ್ ಸಯೀದ್ ಆಪ್ತ, ಲಷ್ಕರ್ ಕಮಾಂಡರ್ ಶೇಖ್ ಯೂಸುಫ್ ಅಫ್ರಿದಿ ಹತ್ಯೆ!

ಜಿಂಬಾಬ್ವೆ ಹೋಟೆಲ್‌ಗೆ ನುಗ್ಗಿದ 12 ಅಡಿ ಉದ್ದದ ಮೊಸಳೆ : ಕಿಚನ್ ಕೌಂಟರ್ ಏರಿ ಕುಳಿತ ‘ಅನಿರೀಕ್ಷಿತ ಅತಿಥಿ’!
ವಿದೇಶ

ಜಿಂಬಾಬ್ವೆ ಹೋಟೆಲ್‌ಗೆ ನುಗ್ಗಿದ 12 ಅಡಿ ಉದ್ದದ ಮೊಸಳೆ : ಕಿಚನ್ ಕೌಂಟರ್ ಏರಿ ಕುಳಿತ ‘ಅನಿರೀಕ್ಷಿತ ಅತಿಥಿ’!

ಅಮೆರಿಕದ ಪರ ಒಲವು : ‘ಮಧ್ಯಸ್ಥಿಕೆದಾರ’ ಪಾಕಿಸ್ತಾನದ ವಿರುದ್ಧ ಇರಾನ್ ಸಂಸದನ ಗಂಭೀರ ಆರೋಪ!
ವಿದೇಶ

ಅಮೆರಿಕದ ಪರ ಒಲವು : ‘ಮಧ್ಯಸ್ಥಿಕೆದಾರ’ ಪಾಕಿಸ್ತಾನದ ವಿರುದ್ಧ ಇರಾನ್ ಸಂಸದನ ಗಂಭೀರ ಆರೋಪ!

ಟ್ರಂಪ್ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ: ದಾಳಿಕೋರನ ‘ಟಾರ್ಗೆಟ್’ ಲಿಸ್ಟ್‌ನಲ್ಲಿ ಇರದ ಏಕೈಕ ಹೆಸರು ಕಶ್ ಪಟೇಲ್!
ವಿದೇಶ

ಟ್ರಂಪ್ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ: ದಾಳಿಕೋರನ ‘ಟಾರ್ಗೆಟ್’ ಲಿಸ್ಟ್‌ನಲ್ಲಿ ಇರದ ಏಕೈಕ ಹೆಸರು ಕಶ್ ಪಟೇಲ್!

ಗಗನಕ್ಕೇರಿದ ನಿರ್ಮಾಣ ವೆಚ್ಚಕ್ಕೆ ಬೇಸತ್ತ ಅಮೆರಿಕನ್ನರು : ಮನೆ ಕಟ್ಟಲು ಚೀನಾದಿಂದಲೇ ಸಾಮಗ್ರಿಗಳ ಆಮದು!
ವಿದೇಶ

ಗಗನಕ್ಕೇರಿದ ನಿರ್ಮಾಣ ವೆಚ್ಚಕ್ಕೆ ಬೇಸತ್ತ ಅಮೆರಿಕನ್ನರು : ಮನೆ ಕಟ್ಟಲು ಚೀನಾದಿಂದಲೇ ಸಾಮಗ್ರಿಗಳ ಆಮದು!

Next Post
ರಥದ ಚಕ್ರಕ್ಕೆ ಸಿಲುಕಿ ವ್ಯಕ್ತಿಯ ಎರಡೂ ಕಾಲು ಕಟ್ – ಮೂವರಿಗೆ ಗಂಭೀರ ಗಾಯ!

ರಥದ ಚಕ್ರಕ್ಕೆ ಸಿಲುಕಿ ವ್ಯಕ್ತಿಯ ಎರಡೂ ಕಾಲು ಕಟ್ - ಮೂವರಿಗೆ ಗಂಭೀರ ಗಾಯ!

  • Trending
  • Comments
  • Latest
ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಚೆಕ್​ಬೌನ್ಸ್​ ಪ್ರಕರಣ; ಆರೋಪಿ ಸೆರೆ

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಕುಂಭಮೇಳದಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಅತ್ಯಾಚಾರ ಆರೋಪ: ನಿರ್ದೇಶಕ ಅರೆಸ್ಟ್

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ನಡೆದಿದೆ ಪೈಪೋಟಿ!

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ನ.9ಕ್ಕೆ ‘ಟೆನ್ಶನ್ ಟೆನ್ಶನ್’ ಸಾಂಗ್ ಲಗ್ಗೆ.. ಅಪರೂಪದ ಪ್ರಯತ್ನ ನಿಮಗೋಸ್ಕರ

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಕುಡಿದ ಮತ್ತಿನಲ್ಲಿ ಸಿಕ್ಕ ಸಿಕ್ಕವರನ್ನು ಕಚ್ಚಿದ ವ್ಯಕ್ತಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಹೃದಯಾಘಾತಕ್ಕೆ ಪತಿ ಬಲಿ; 7ನೇ ಮಹಡಿಯಿಂದ ಹಾರಿದ ಪತ್ನಿ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಕನ್ನಡದಲ್ಲಿ ಐಎಸ್ ಬರೆದ ಮೊದಲಿಗ ಹಾಗೂ ನಟ ಶಿವರಾಮ್ ಆರೋಗ್ಯ ಸ್ಥಿತಿ ಗಂಭೀರ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಪಿಎಂ ಕಿಸಾನ್ 16ನೇ ಕಂತಿನ ಹಣ ಬಿಡುಗಡೆ!

ಭಾರತ-ನ್ಯೂಜಿಲೆಂಡ್ ನಡುವೆ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದ : ಇಂದಿನಿಂದಲೇ 8,000ಕ್ಕೂ ಹೆಚ್ಚು ಭಾರತೀಯ ಉತ್ಪನ್ನಗಳಿಗೆ ತೆರಿಗೆ ಮುಕ್ತ ಪ್ರವೇಶ!

ಭಾರತ-ನ್ಯೂಜಿಲೆಂಡ್ ನಡುವೆ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದ : ಇಂದಿನಿಂದಲೇ 8,000ಕ್ಕೂ ಹೆಚ್ಚು ಭಾರತೀಯ ಉತ್ಪನ್ನಗಳಿಗೆ ತೆರಿಗೆ ಮುಕ್ತ ಪ್ರವೇಶ!

ಡೆಲ್ಲಿ ವಿರುದ್ಧದ ಮಹತ್ವದ ಪಂದ್ಯದಿಂದ ಹೊರಗುಳಿದ ಆರ್‌ಸಿಬಿ ತಾರೆ ಫಿಲ್ ಸಾಲ್ಟ್ ; ರಸಿಖ್ ಸಲಾಮ್ ಕೂಡ ಅಲಭ್ಯ

ಡೆಲ್ಲಿ ವಿರುದ್ಧದ ಮಹತ್ವದ ಪಂದ್ಯದಿಂದ ಹೊರಗುಳಿದ ಆರ್‌ಸಿಬಿ ತಾರೆ ಫಿಲ್ ಸಾಲ್ಟ್ ; ರಸಿಖ್ ಸಲಾಮ್ ಕೂಡ ಅಲಭ್ಯ

“ಮಗುವಾದ ಮೇಲೆ ಅತ್ಯಾಚಾರದ ಆರೋಪವೇ?”: ಲಿವ್-ಇನ್ ಸಂಬಂಧಗಳ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ಪ್ರಶ್ನೆ

“ಮಗುವಾದ ಮೇಲೆ ಅತ್ಯಾಚಾರದ ಆರೋಪವೇ?”: ಲಿವ್-ಇನ್ ಸಂಬಂಧಗಳ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ಪ್ರಶ್ನೆ

ಡೆಲ್ಲಿ-ಪಂಜಾಬ್ ಪಂದ್ಯದಲ್ಲಿ ಕಳಪೆ ಫೀಲ್ಡಿಂಗ್, ಕೈಚೆಲ್ಲಿದ ಕ್ಯಾಚ್‌ಗಳು ; ಆಟಗಾರರನ್ನು ಕಾಡುತ್ತಿದೆಯೇ ಆಯಾಸ?

ಡೆಲ್ಲಿ-ಪಂಜಾಬ್ ಪಂದ್ಯದಲ್ಲಿ ಕಳಪೆ ಫೀಲ್ಡಿಂಗ್, ಕೈಚೆಲ್ಲಿದ ಕ್ಯಾಚ್‌ಗಳು ; ಆಟಗಾರರನ್ನು ಕಾಡುತ್ತಿದೆಯೇ ಆಯಾಸ?

Recent News

ಬಂಧು ಮಿತ್ರರೇ ನಮಸ್ತೇ,

ನಿಖರ, ಪ್ರಖರ, ಸ್ಪಷ್ಟ ಹಾಗೂ ವಸ್ತುನಿಷ್ಠ ಸುದ್ದಿ ನೀಡುವ ಭರವಸೆಯೊಂದಿಗೆ ನಮ್ಮ “ಕರ್ನಾಟಕ ನ್ಯೂಸ್ ಬೀಟ್” ಸುದ್ದಿ ಮಾಧ್ಯಮವನ್ನು ಚಾಲ್ತಿಗೆ ತಂದಿದ್ದೇವೆ. ಜಿಲ್ಲಾ ಸುದ್ದಿ, ಪ್ರಸ್ತುತ ಸುದ್ದಿ, ವಿಶೇಷ ಅಂಕಣ, ಧರ್ಮ, ಸನಾತನ, ರಾಜಕೀಯ, ಸಿನಿಮಾ, ಅಪರಾಧ, ಕ್ರೀಡೆ, ಆರೋಗ್ಯ, ಆಹಾರ, ತಂತ್ರಜ್ಞಾನ, ಕೃಷಿ, ಪರಿಸರ, ಸಾಹಿತ್ಯ, ವಾಣಿಜ್ಯ, ಜ್ಯೋತಿಷ್ಯ, ಪುರಾಣ, ಇತಿಹಾಸ ಸೇರಿದಂತೆ ಈ ಸಮಾಜದ ಪ್ರತಿ ವಿಭಾಗದಲ್ಲೂ ನಾವು ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ ಸಾಗುತ್ತೇವೆ. ಒಟ್ಟಿನಲ್ಲಿ, ಬರವಣಿಗೆಯಲ್ಲೇ ಭಗವಂತನನ್ನ ಕಾಣುತ್ತಿರುವ, ಸದೃಢ ತಂಡದೊಂದಿಗೆ, ಕರ್ನಾಟಕ ನ್ಯೂಸ್ ಬೀಟ್ ಸುದ್ದಿ ಮಾಧ್ಯಮವು, ವಿಶೇಷವಾಗಿ ಸುದ್ದಿ, ವರದಿ, ಅಂಕಣ, ಚಿತ್ರಣಗಳನ್ನು ಹೊತ್ತು ತರುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದೆ.

Follow Us

Join Our WhatsApp Channel

Browse by Category

  • national
  • News & Politics
  • state
  • Uncategorized
  • ಅಪರಾಧ
  • ಅಮರಾವತಿ
  • ಆರೋಗ್ಯ-ಆಹಾರ
  • ಇತರೆ ಸುದ್ದಿ
  • ಇತಿಹಾಸ
  • ಉಡುಪಿ
  • ಉತ್ತರ ಕನ್ನಡ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಕಲಬುರ್ಗಿ
  • ಕೃಷಿ-ಪರಿಸರ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕಬಳ್ಳಾಫುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ತುಮಕೂರು
  • ದಕ್ಷಿಣ ಕನ್ನಡ
  • ದಾವಣಗೆರೆ
  • ದೇಶ
  • ಧರ್ಮ-ಸನಾತನ
  • ಧಾರವಾಡ
  • ಪುರಾಣ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂಗಳೂರು
  • ಬೆಂಗಳೂರು ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಮಂಗಳೂರು
  • ಮಂಡ್ಯ
  • ಮುಖ್ಯಾಂಶಗಳು
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಜ್ಯ
  • ರಾಮನಗರ
  • ರಾಯಚೂರು
  • ವಾಣಿಜ್ಯ-ವ್ಯಾಪಾರ
  • ವಿಜಯನಗರ
  • ವಿಜಯಪುರ
  • ವಿದೇಶ
  • ವಿಶೇಷ ಅಂಕಣ
  • ವೀಡಿಯೊ ಸುದ್ದಿ
  • ವ್ಯಾಪಾರ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ಶಿವಮೊಗ್ಗ
  • ಸಿನಿಮಾ-ಮನರಂಜನೆ
  • ಹಾವೇರಿ
  • ಹಾಸನ
  • ಹುಬ್ಬಳ್ಳಿ

Recent News

ಭಾರತ-ನ್ಯೂಜಿಲೆಂಡ್ ನಡುವೆ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದ : ಇಂದಿನಿಂದಲೇ 8,000ಕ್ಕೂ ಹೆಚ್ಚು ಭಾರತೀಯ ಉತ್ಪನ್ನಗಳಿಗೆ ತೆರಿಗೆ ಮುಕ್ತ ಪ್ರವೇಶ!

ಭಾರತ-ನ್ಯೂಜಿಲೆಂಡ್ ನಡುವೆ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದ : ಇಂದಿನಿಂದಲೇ 8,000ಕ್ಕೂ ಹೆಚ್ಚು ಭಾರತೀಯ ಉತ್ಪನ್ನಗಳಿಗೆ ತೆರಿಗೆ ಮುಕ್ತ ಪ್ರವೇಶ!

ಡೆಲ್ಲಿ ವಿರುದ್ಧದ ಮಹತ್ವದ ಪಂದ್ಯದಿಂದ ಹೊರಗುಳಿದ ಆರ್‌ಸಿಬಿ ತಾರೆ ಫಿಲ್ ಸಾಲ್ಟ್ ; ರಸಿಖ್ ಸಲಾಮ್ ಕೂಡ ಅಲಭ್ಯ

ಡೆಲ್ಲಿ ವಿರುದ್ಧದ ಮಹತ್ವದ ಪಂದ್ಯದಿಂದ ಹೊರಗುಳಿದ ಆರ್‌ಸಿಬಿ ತಾರೆ ಫಿಲ್ ಸಾಲ್ಟ್ ; ರಸಿಖ್ ಸಲಾಮ್ ಕೂಡ ಅಲಭ್ಯ

  • About
  • Advertise
  • Privacy & Policy
  • Contact Us

© 2025 Karnatakanewsbeat

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಕ್ರೀಡೆ
  • ಸಿನಿಮಾ-ಮನರಂಜನೆ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ಅಪರಾಧ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ಪುರಾಣ
  • ಇತಿಹಾಸ

© 2025 Karnatakanewsbeat