ಬೆಂಗಳೂರು : ಬೆಂಗಳೂರಿನ ಉತ್ತರ ವಿಭಾಗದಲ್ಲಿ ಇಬ್ಬರು ಯುವಕರ ಅಸಭ್ಯ ವರ್ತನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದ ಇಬ್ಬರು ಪುಂಡರು, ರಸ್ತೆ ಬದಿ ನಡೆದು ಹೋಗುತ್ತಿದ್ದ ಯುವತಿಯರ ಮೈಮುಟ್ಟಿ ಎಸ್ಕೇಪ್ ಆಗಿರುವ ಘಟನೆ ಬೆಳಕಿಗೆ ಬಂದಿದೆ.
KA 50 W7193 ನೋಂದಣಿ ಸಂಖ್ಯೆಯ ಸ್ಕೂಟರ್ ಕೃತ್ಯಕ್ಕೆ ಬಳಸಲಾಗಿದ್ದು, ನಂಬರ್ ಪ್ಲೇಟ್ ಕೂಡ ಸ್ಪಷ್ಟವಾಗಿಲ್ಲ. ಒಂದು ಅಕ್ಷರವನ್ನು ಉದ್ದೇಶಪೂರ್ವಕವಾಗಿ ಅಳಿಸಿರುವುದು ಗಮನಕ್ಕೆ ಬಂದಿದೆ.
ಇದಕ್ಕೆ ಜೊತೆಗೆ ಸಂಚಾರಿ ನಿಯಮಗಳನ್ನು ಲೆಕ್ಕಿಸದೆ ವೇಗವಾಗಿ ವಾಹನ ಚಲಾಯಿಸುತ್ತಿರುವುದೂ ಕಂಡುಬಂದಿದೆ. ಈ ಘಟನೆ ಹಿನ್ನೆಲೆಯಲ್ಲಿ ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡಬೇಕು ಎಂದು ಸಾರ್ವಜನಿಕರು ಪೊಲೀಸರಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಕುಡಿಯುವ ನೀರಿಗಾಗಿ ಹಾಹಾಕಾರ – ಸಚಿವರ ಕಾರು ಅಡ್ಡಗಟ್ಟಿ ಮಹಿಳೆಯರ ಆಕ್ರೋಶ!



















