ಬೆಂಗಳೂರು : ಬೆಂಗಳೂರಿನಲ್ಲೇ ಕೇಂದ್ರ ಸರ್ಕಾರದ ಹುದ್ದೆಗಳನ್ನು ಹುಡುಕುತ್ತಿರುವವರಿಗೆ ಸಿಹಿ ಸುದ್ದಿ ದೊರೆತಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ (IISc Recruitment 2026) ಸಂಸ್ಥೆಯಲ್ಲಿ ಖಾಲಿ ಇರುವ ಒಂದು ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಅಭ್ಯರ್ಥಿಗಳಿಗೆ ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.
ಹುದ್ದೆಗಳ ವಿವರ
ನೇಮಕಾತಿ ಸಂಸ್ಥೆ: ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್
ಹುದ್ದೆಗಳ ಹೆಸರು: ಅಸಿಸ್ಟಂಟ್ ಪ್ಲೇಸ್ ಮೆಂಟ್ ಆಫೀಸರ್
ಒಟ್ಟು ಹುದ್ದೆಗಳು: 01
ಅರ್ಜಿ ಸಲ್ಲಿಕೆ ವಿಧಾನ: ಆನ್ ಲೈನ್
ಅರ್ಜಿ ಸಲ್ಲಿಕೆಗೆ ಕೊನೆಯ ದಿನ: ಮೇ 21
ಅರ್ಜಿ ಸಲ್ಲಿಸಲು ಬಯಸುವವರು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ ಅಥವಾ ಮಂಡಳಿಗಳಲ್ಲಿ ಸ್ನಾತಕೋತ್ತರ ಪದವಿ ಮುಗಿಸಿರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅರ್ಜಿ ಸಲ್ಲಿಸುವವರಿಗೆ ಗರಿಷ್ಠ 40 ವರ್ಷಗಳ ವಯೋಮಿತಿ ಇದೆ. ಎಸ್ಸಿ, ಎಸ್ಟಿ ಸಮುದಾಯದವರಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ಇದೆ. ಒಬಿಸಿ ಸಮುದಾಯವರಿಗೆ 3 ವರ್ಷಗಳ ಸಡಿಲಿಕೆ ಅನ್ವಯವಾಗುತ್ತದೆ. ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ. ನೇಮಕಾತಿ ಹೊಂದಿದವರಿಗೆ ಮಾಸಿಕ 40 ಸಾವಿರ ರೂಪಾಯಿಯಿಂದ 65 ಸಾವಿರ ರೂಪಾಯಿವರೆಗೆ ಸಂಬಳ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮೊದಲಿಗೆ iisc.ac.in ವೆಬ್ ಸೈಟ್ ಗೆ ಭೇಟಿ ನೀಡಬೇಕು. ಅಧಿಸೂಚನೆಯನ್ನು ಗಮನವಿಟ್ಟು ಓದಿಕೊಂಡು ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಆನ್ ಲೈನ್ ಮೂಲಕವೇ ಅರ್ಜಿ ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಅಪ್ ಲೋಡ್ ಮಾಡಬೇಕು. ಅರ್ಜಿ ಪರಿಶೀಲನೆಯ ಬಳಿಕ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆದು, ನಂತರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಇದನ್ನೂ ಓದಿ : ’15 ವರ್ಷದ ನೋವಿನ ಪಯಣಕ್ಕೆ ಮುಕ್ತಿ’ : ಚೊಚ್ಚಲ IPL ವಿಕೆಟ್ ಪಡೆದು ಭಾವುಕ ಪತ್ರ ಪ್ರದರ್ಶಿಸಿದ ರಘು ಶರ್ಮಾ!


















