ಬೆಳಗಾವಿ : ಬೆಳಗಾವಿಯನ್ನ ಎರಡನೇ ರಾಜಧಾನಿ ಎಂದು ಹೇಳುತ್ತೇವೆ. ನಮಗೂ ಸಚಿವ ಸ್ಥಾನ ಕೊಟ್ಟರೆ ಜನ ಸೇವೆ ಮಾಡಲು ಆಗುತ್ತದೆ ಎಂದು ಶಾಸಕ ಆಸೀಫ್ ಸೇಠ್ ಹೇಳಿದ್ದಾರೆ.
ಸಚಿವ ಸಂಪುಟ ಬದಲಾವಣೆ ವಿಚರಾವಾಗಿ ಇಂದು ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆಸೀಫ್ ಸೇಠ್, ಉತ್ತರ ಕರ್ನಾಟಕದಲ್ಲಿ ಅಲ್ಪಸಂಖ್ಯಾತ ಒಬ್ಬನೆ ಇದ್ದೇನೆ. ಮೈಸೂರು, ಮಂಗಳೂರಿಗೆ ಯಾವಾಗಲೂ ಸಚಿವ ಸ್ಥಾನ ಕೊಡತ್ತಾ ಇದ್ದಾರೆ. ಉತ್ತರ ಕರ್ನಾಟಕಕ್ಕೆ ಕೊಡತ್ತಾ ಇಲ್ಲಾ ಬೆಳಗಾವಿ ನಗರಕ್ಕೆ ಅಣ್ಣಾವ್ರು (ಪಿರೋಜ್ ಸೇಠ್) ಎರಡು ಭಾರಿ ಇದ್ದರೂ ಈಗ ನಾನು ಇದ್ದೇನೆ ಎಂದು ಹೇಳಿದ್ದಾರೆ.
ಇನ್ನು ಶಾಸಕರು, ಸಚಿವರು ದೆಹಲಿ ದಂಡಯಾತ್ರೆ ವಿಚಾರವಾಗಿ ಮಾತನಾಡಿ, ನಾನು ಹೋಗುವುದಿಲ್ಲಾ ಹೈಕಮಾಂಡ ಡಿಸಿಷನ್ ತಗೋಳುತ್ತೆ. ಹೈಕಮಾಂಡಗೆ ಗೊತ್ತಿದೆ ಯಾವಾಗ ಏನ ಮಾಡಬೇಕು ಅಂತಾ. ಅಧ್ಯಕ್ಷ ಡಿಕೆ ಶಿವಕುಮಾರ್, ಸಿಎಂ ಸಿದ್ದರಾಮಯ್ಯ, ಸತೀಶ ಜಾರಕಿಹೊಳಿ, ಸುರ್ಜೇವಾಲಾ, ಖರ್ಗೆ ಇದ್ದಾರೆ. ಸಮಯಕ್ಕೆ ತಕ್ಕಂತೆ ಅವರು ಡಿಸಿಷನ್ ತಗೋಳ್ಳುತ್ತಾರೆ ಎಂದು ತಿಳಿಸಿದ್ದಾರೆ
ಸಚಿವ ಜಮೀರ ಅಹ್ಮದ್ ಉಚ್ಛಾಟಣೆ ವಿಚಾರವಾಗಿ ಪ್ರತಿಕ್ರಯಿಸಿ, ನನಗೂ ಗೊತ್ತಿಲ್ಲಾ ನೀವ ಹೇಳಿದ ಮೇಲೆ ಗೊತ್ತಾಗಿದೆ. ನಾನು ಕೂಡಾ ನಾಲ್ಕು ದಿನ ಬಾಗಲಕೋಟ ಜಿಲ್ಲೆಯಲ್ಲಿದ್ದೆ. ಯಾಕ ಮಾಡಿದರು, ಏನು ಅಂತಾ ನನಗೆ ಗೊತ್ತಿಲ್ಲಾ. ನಾನು ಅವರ ಜೊತೆ ಮಾತನಾಡಿ ತಿಳಿಸುತ್ತೇನೆ ಎಂದಿದ್ದಾರೆ.
ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿಲ್ಲಾ ಎನ್ನುವ ವಿಚಾರಕ್ಕೆ ನೋವ ಆಗಿರಬೇಕು. ಸಚಿವರು ಶಾಸಕರೂ ಕೂಡಿ ದಾವಣಗೆರೆ ಪ್ರಚಾರ ಮಾಡಿದ್ದೇವೆ 80% ನಮ್ಮದೆ ಅಲ್ಪಸಂಖ್ಯಾತರಿದ್ದಾರೆ. ಪರಂಪರೆ ಇದೆ ನಮಗೆ ಟಿಕೆಟ್ ಕೊಡಿ ಎಂದಿದ್ದಕ್ಕೆ ಪ್ಯಾಮಿಲಿ ಟಿಕೆಟ್ ನೀಡಿದ್ದಾರೆ. ಎಲ್ಲಾ ಮುಗಿದ ಬಳಿಕ ಹೈಕಮಾಂಡ್ ಡಿಸಿಷನ್ ಬಳಿಕ ಎಲ್ಲರೂ ಒಪ್ಪಗೊಂಡು ಕೆಲಸ ಮಾಡಿದ್ದೇವೆ. ಜಮೀರ ಅಹ್ಮದ್ ಹಾಗೂ ತನ್ವೀರ ಸೇಠ್ ನಾವು ಕೂಡಾ ಕೆಲಸ ಮಾಡಿದ್ದೇವೆ. ಏನ ಆಗಿದೆ ಅಂತಾ ಹೋಗಿ ಚೆಕ್ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಕೊಪ್ಪಳದ ಲವ್ ಜಿಹಾದ್ ಕೇಸ್ ಹಿಂದೆ ಕಾಂಗ್ರೆಸ್ ಕೈವಾಡವಿದೆ : ಬಿಜೆಪಿ ಮುಖಂಡ ಬಸವರಾಜ್ ಕ್ಯಾವಟರ್



















