ಬೆಂಗಳೂರು : ಮಕ್ಕಳ ಗುಂಪೊಂದು ಆಟವಾಡುತ್ತಿರುವಾಗ ಕಾಂಪೌಂಡ್ ಗೇಟ್ ಬಿದ್ದು ಮಗು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಂಗಳೂರು ಉತ್ತರ ತಾಲ್ಲೂಕಿನ ಚಿಕ್ಕಬಾಣಾವರ ದ್ವಾರಕಾನಗರದಲ್ಲಿ ನಡೆದಿದೆ.
ಅವಘಡದಲ್ಲಿ ಗೌಸಿಯಾ ಎಂಬ 5 ವರ್ಷದ ಮಗು ಸಾವನ್ನಪ್ಪಿದೆ. ಅಣ್ಣ ಇಮಾಮ್, ತಂಗಿ ಶಕಿಲಾ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಲ್ಲಿ 3 ವರ್ಷದ ಮಗು ಸುಮಯ್ ಸ್ಥಿತಿ ಗಂಭೀರವಾಗಿದೆ.
ಗೌಸಿಯಾ, ಇಮಾಮ್-ರಮೀಜಾ ದಂಪತಿ ಮಗು ಎಂದು ತಿಳಿದುಬಂದಿದೆ. ಇವರು ಕಳೆದ 5 ತಿಂಗಳ ಹಿಂದೆಯಷ್ಟೇ ಬಾಡಿಗೆ ಮನೆಗೆ ಬಂದಿದ್ದರು. ಬಸ್ ನಿಲ್ದಾಣದ ಬಳಿ ಹಣ್ಣಿನ ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದ ದಂಪತಿ, ರವಿಶಂಕರ್ ಎಂಬುವವರಿಗೆ ಸೇರಿದ್ದ ಮನೆಯಲ್ಲಿ ವಾಸವಾಗಿದ್ದರು.
ಸದ್ಯ ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಮೃತದೇಹ ರವಾನಿಸಲಾಗಿದೆ. ಚಿಕ್ಕಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಭಾರತೀಯ ಸೇನೆಗೆ ಹೊಸ ಸಾರಥಿಗಳು : Lt. Gen. ಎನ್‌ಎಸ್ ರಾಜಾ ಸುಬ್ರಮಣಿ ರಕ್ಷಣಾ ಪಡೆಗಳ ನೂತನ ಮುಖ್ಯಸ್ಥ!



















