ಬೀದರ್ : ಭಾರತ್ ಗ್ಯಾಸ್ ಪೈಪ್‌ಲೈನ್ ಲೀಕ್ ಸಂಭವಿಸಿ ಬೆಳಗ್ಗಿನ ಜಾವ ಭಾರೀ ಆತಂಕದ ವಾತಾವರಣ ನಿರ್ಮಾಣವಾದ ಘಟನೆ ಬೀದರ್‌ನ ಬೀದರ್ ನಗರದ ಜೈಲ್ ಕಾಲನಿಯಲ್ಲಿ ನಡೆದಿದೆ.
ಏಕಾಏಕಿ ಗ್ಯಾಸ್ ಪೈಪ್ ಲೀಕ್ ಆಗಿದ್ದು, ಕೆಲವೇ ಕ್ಷಣಗಳಲ್ಲಿ ಬೆಂಕಿಯ ಜ್ವಾಲೆ ಧಗಧಗಿಸಿದೆ. ಗ್ಯಾಸ್ ಲೀಕ್ ತಕ್ಷಣ ತಡೆಗಟ್ಟಲು ಸಾಧ್ಯವಾಗದೆ ಕೆಲಕಾಲ ಆತಂಕ ಮುಂದುವರಿದಿತ್ತು. ಘಟನೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ತಕ್ಷಣ ಕಾರ್ಯಾಚರಣೆ ನಡೆಸಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಸಾಕಷ್ಟು ಹರಸಾಹಸ ಪಟ್ಟಿದ್ದಾರೆ.
ಈ ವೇಳೆ ಭಾರತ್ ಗ್ಯಾಸ್ ಸಿಬ್ಬಂದಿಗಳ ವಿರುದ್ಧ ಜೈಲ್ ಕಾಲನಿ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿರ್ಲಕ್ಷ್ಯವೇ ಈ ಅವಘಡಕ್ಕೆ ಕಾರಣ ಎಂದು ಆರೋಪಿಸಿದ್ದು, ಹೆಲ್ಪ್‌ಲೈನ್ ಸರಿಯಾಗಿ ಕೆಲಸ ಮಾಡಲಿಲ್ಲ ಎಂದು ಸಾರ್ವಜನಿಕರು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೊನೆಗೆ ಭಾರತ್ ಗ್ಯಾಸ್ ಸಿಬ್ಬಂದಿಗಳೇ ಗ್ಯಾಸ್ ಲೀಕ್‌ನ್ನು ನಿಯಂತ್ರಣಕ್ಕೆ ತಂದು ಪರಿಸ್ಥಿತಿಯನ್ನು ಸಂಪೂರ್ಣ ಶಾಂತಗೊಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಭಾರತ್ ಗ್ಯಾಸ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಡೆಲ್ಲಿ ವಿರುದ್ಧದ ಪಂದ್ಯದಿಂದಲೂ ಧೋನಿ ಔಟ್ ; ಚೆನ್ನೈನಲ್ಲಿಯೇ ಮುಂದುವರಿದ ಚಿಕಿತ್ಸೆ!



















