ಗುಜರಾತ್ ನ ಮಾಜಿ ಸಿಎಂಗೆ ತಾವು ನಂಬಿದ್ದ ಅದೃಷ್ಟದ ಸಂಖ್ಯೆಯೇ ಶಾಪವಾಗಿಬಿಡ್ತಾ ಎನ್ನುವ ಚರ್ಚೆ ಶುರುವಾಗಿದೆ.
ನಿನ್ನೆ ಅಹಮದಾಬಾದ್ ವಿಮಾನ ಅಪಘಾತದಲ್ಲಿ ಪ್ರಾಣತೆತ್ತ ವಿಜಯ್ ರುಪಾನಿ, 1206 ಸಂಖ್ಯೆ ಮೇಲೆ ವಿಪರೀತ ವ್ಯಾಮೋಹ. ತಮ್ಮ ರಾಜಕೀಯ ಜೀವನದಲ್ಲೂ ಇದೇ ಸಂಖ್ಯೆಯನ್ನು ಆಧರಿಸಿ ನಾಮಪತ್ರ, ಪ್ರಮಾಣ ವಚನದಂತಹ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದರು. ಅಷ್ಟೇ ಅಲ್ಲಾ ಅವರ ಮೊದಲ ಸ್ಕೂಟರ್ ನಿಂದ ಹಿಡಿದು ಇತ್ತೀಚಿನ ಹೊಸ ಕಾರಿನವರೆಗೂ ಎಲ್ಲ ವಾಹನಗಳ ನೋಂದಣಿ ಸಂಖ್ಯೆಯೂ 1206 ಆಗಿತ್ತು ಎನ್ನುವುದು ವಿಶೇಷ.
ಆದರೆ, ನಿನ್ನೆ ಇದೇ ಸಂಖ್ಯೆ ಅವರ ಬದುಕಿನ ಅಂತ್ಯಕ್ಕೂ ಸಾಕ್ಷಿಯಾಗಿದ್ದು ವಿಪರ್ಯಾಸ. ನಿನ್ನೆಯ ದಿನಾಂಕ 12 ಮತ್ತು ತಿಂಗಳು ಜೂನ್ ಅಂದರೆ 6ನೇ ತಿಂಗಳು. ಅಲ್ಲಿಗೆ ರುಪಾನಿ ಪಾಲಿನ ಅದೃಷ್ಟದ ಸಂಖ್ಯೆ ನಿನ್ನೆ. ಅವರ ಪಾಲಿಗೆ ದುರಾದೃಷ್ಟವಾಗಿ ಪರಿಣಮಿಸಿದ್ದು, ವಿಪರ್ಯಾಸವೇ ಸರಿ. ಲಂಡನ್ ನಲ್ಲಿದ್ದ ಪತ್ನಿಯನ್ನು ಕರೆತರಲೆಂದೇ ರುಪಾನಿ ವಿಮಾನ ಹತ್ತಿದ್ದರು. ಮಗಳೊಟ್ಟಿಗೆ ಲಂಡನ್ ನಲ್ಲಿ ನೆಲೆಸಿದ್ದ ಪತ್ನಿಯನ್ನು ವಾಪಸ್ ಕರೆತರಲೆಂದೇ ರುಪಾನಿ ನಿನ್ನೆ ಡ್ರೀಮ್ ಲೈನರ್ ವಿಮಾನ ಏರಿದ್ದರು.



















