ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಟಾಕ್ಸಿಕ್’ ಸಿನಿಮಾದ ಮೊದಲ ಸಾಂಗ್ ‘ತಬಾಹಿ’ ರಿಲೀಸ್ ಆಗಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ಸಂಚಲನ ಮೂಡಿಸಿದೆ.
ಈ ಹಾಡಿನಲ್ಲಿ ಯಶ್ ಹಾಗೂ ಕಿಯಾರಾ ಕೆಮಿಸ್ಟ್ರಿ ಹೈಲೈಟ್ ಆಗಿದೆ. ಗ್ಯಾಂಗ್‌ಸ್ಟರ್ ಪ್ರೀತಿಯ ಕಥೆಯನ್ನು ಈ ಹಾಡು ರೊಮ್ಯಾಂಟಿಕ್ ರೀತಿಯಲ್ಲಿ ತೆರೆದಿಡುತ್ತದೆ. ಸಾಮಾನ್ಯ ಲವ್ ಸಾಂಗ್‌ಗಿಂತ ಇದು ಸ್ವಲ್ಪ ಬೋಲ್ಡ್ ಆಗಿ ಮೂಡಿಬಂದಿದೆ.
ಹಾಡಿಗೆ ವಿಶಾಲ್ ಮಿಶ್ರಾ ಸಂಗೀತ ಸಂಯೋಜನೆ ಮಾಡಿದ್ದು, ಅವರೇ ಹಿನ್ನೆಲೆ ಗಾಯನವನ್ನೂ ನೀಡಿದ್ದಾರೆ. ಕನ್ನಡದಲ್ಲಿ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದು, ಇತರೆ ಭಾಷೆಗಳಲ್ಲಿ ಆಯಾ ಚಿತ್ರರಂಗದ ಖ್ಯಾತ ಗೀತರಚನೆಕಾರರು ಸಾಹಿತ್ಯ ರಚಿಸಿದ್ದಾರೆ.
ಈ ಹಾಡು ಸಾಮಾನ್ಯ ಡ್ಯುಯೆಟ್ ಆಗಿರದೆ, ಮಾಂಟೇಜ್ ಶೈಲಿಯಲ್ಲಿ ಮೂಡಿಬಂದಿದೆ. ಭಾವನಾತ್ಮಕ ಹಾಗೂ ರೊಮ್ಯಾಂಟಿಕ್ ದೃಶ್ಯಗಳು ಹಾಡಿನ ಪ್ರಮುಖ ಆಕರ್ಷಣೆಯಾಗಿವೆ. ಸ್ವಾರ್ಥಿ ಎಂದು ಕರೆಸಿಕೊಳ್ಳುವ ನಾಯಕನ ಬದುಕಿನಲ್ಲಿ ಪ್ರೀತಿಯನ್ನು ತರುವ ಯುವತಿಯಾಗಿ ಕಿಯಾರಾ ಕಾಣಿಸಿಕೊಂಡಿದ್ದಾರೆ.
ಯಶ್ ರಗಡ್ ಲುಕ್‌ನಲ್ಲಿ ಪ್ರೀತಿಗೆ ಹಾತೊರೆಯುವ ವ್ಯಕ್ತಿಯಾಗಿ ಮಿಂಚಿದ್ದರೆ, ಕಿಯಾರಾ ಗ್ಲಾಮರಸ್ ಲುಕ್‌ನಲ್ಲಿ ಗಮನ ಸೆಳೆದಿದ್ದಾರೆ. ಹಾಡಿನ ವಿಡಿಯೋದಲ್ಲಿ ನಯನತಾರಾ ಹಾಗೂ ತಾರಾ ಸುತಾರಿಯಾ ಕೂಡ ಕಾಣಿಸಿಕೊಂಡಿದ್ದಾರೆ. ಒಟ್ಟಿನಲ್ಲಿ, ‘ಟಾಕ್ಸಿಕ್’ ಚಿತ್ರದ ಮೊದಲ ವಿಡಿಯೋ ಸಾಂಗ್ ಈಗ ಸಿನಿಪ್ರಿಯರ ನಡುವೆ ಭಾರೀ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ : ಹೇಗಿದೆ ‘ಕರಾವಳಿ’ ಕಂಬಳ ಕನಸು?



















