ಚುನಾವಣಾ ಕಣದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ರಾಜ್ಯದ ಪರಿಷ್ಕೃತ ಅಂತಿಮ ಮತದಾರರ ಪಟ್ಟಿ ಇಂದು ಅಧಿಕೃತವಾಗಿ ಹೊರ ಬೀಳುವ ಸಾಧ್ಯತೆ ಇದೆ. ಇಂದು ಮಧ್ಯಾಹ್ನ 3 ಗಂಟೆಗೆ ಮುಖ್ಯ ಚುನಾವಣಾಧಿಕಾರಿಗಳಿಂದ ಅಂತಿಮ ಪಟ್ಟಿ ಪ್ರಕಟವಾಗುತ್ತಿದ್ದು, ಮತದಾರರ ಪಟ್ಟಿಗೆ ಭರ್ಜರಿ ಸರ್ಜರಿ ಮಾಡಲಾಗಿದೆ.
ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಗೂ ಮುನ್ನ ರಾಜ್ಯದಲ್ಲಿ 5.54 ಕೋಟಿ ಮತದಾರರಿದ್ದರು. ಆದರೆ, ಕರಡು ಪಟ್ಟಿಯಿಂದ ಬರೋಬ್ಬರಿ 1.08 ಕೋಟಿ ಮತದಾರರು ಹೊರಬಿದ್ದಿದ್ದಾರೆ. ವಿವರಗಳಲ್ಲಿ ವ್ಯತ್ಯಾಸವಿದ್ದ ಹಿನ್ನೆಲೆ ಬರೋಬ್ಬರಿ 43.81 ಲಕ್ಷ ಮತದಾರರಿಗೆ ನೋಟಿಸ್ ನೀಡಲಾಗಿತ್ತು. ನಂತರ 6.67 ಲಕ್ಷ ಮಂದಿ ಹೊಸ ನೋಂದಣಿಗೆ ಅರ್ಜಿ ಸಲ್ಲಿಸಿದ್ರು. ಸುಮಾರು 8 ಲಕ್ಷ ಮಂದಿಯ ಹೆಸರು ಮರು ಸೇರ್ಪಡೆಯಾಗಿದೆ. ಸೂಕ್ತ ದಾಖಲೆ ನೀಡದವರ ಹೆಸರನ್ನು ಪಟ್ಟಿಯಿಂದ ಸಂಪೂರ್ಣವಾಗಿ ಕೈಬಿಡುವ ಸಾಧ್ಯತೆಯಿದೆ.

















