‘ಕಾಫಿ ವಿತ್ ಕರಣ್’ ಶೋ ನಂತರ ಆನ್ಲೈನ್ನಲ್ಲಿ ಹರಿದಾಡುತ್ತಿರುವ ಫೇಕ್ ಮತ್ತು ನೆಗೆಟಿವ್ ಕಂಟೆಂಟ್ ಹಾಗೂ ಕಿರುಕುಳದ ವಿರುದ್ಧ ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಹೈದರಾಬಾದ್ ಸೈಬರ್ ಕ್ರೈಂ ಮೆಟ್ಟಿಲೇರಿದ್ದಾರೆ.
ದಾರಿ ತಪ್ಪಿಸುವ ಕಂಟೆಂಟ್ ಬಗ್ಗೆ ತನಿಖೆ ನಡೆಸುವಂತೆ ತನಿಖಾಧಿಕಾರಿಗಳಿಗೆ ಔಪಚಾರಿಕ ದೂರು ನೀಡಲಾಗಿದ್ದು, ವಿಜಯ್ ದೇವರಕೊಂಡ ಮ್ಯಾನೇಜರ್ ಕೆಲವು ಲಿಂಕ್ಗಳನ್ನು ಸಲ್ಲಿಸಿದ್ದಾರೆ. ಆನ್ಲೈನ್ ಕಿರುಕುಳಕ್ಕೆ ಬೇಸತ್ತಿರುವ ಈ ಸ್ಟಾರ್ ಜೋಡಿಯ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಹೈದರಾಬಾದ್ ಸೈಬರ್ ಕ್ರೈಂ ಪೊಲೀಸರು ಪರಿಶೀಲನೆ ನಡೆಸಲು ನಿರ್ಧರಿಸಿದ್ದಾರೆ.



















