ಬಿಜೆಪಿ ಹೈಕಮಾಂಡ್ ರಾಜ್ಯ ಸಂಘಟನೆಯಲ್ಲಿ ಪದಾಧಿಕಾರಿಗಳ ಬದಲಾವಣೆಗೆ ಸಿದ್ಧತೆ ನಡೆಸಿದ್ದು, ಎಲ್ಲದಕ್ಕೂ ಸಿದ್ಧರಿರುವಂತೆ ರಾಜ್ಯ ನಾಯಕರಿಗೆ ಸೂಚನೆ ನೀಡಿದೆ. 2028ರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹಿರಿಯರು ಮತ್ತು ಯುವಕರಿಗೆ ಆದ್ಯತೆ ನೀಡಿ ವಿಜಯೇಂದ್ರ ನೇತೃತ್ವದಲ್ಲೇ ಹೊಸ ತಂಡ ರಚಿಸಲು ಹರೀಶ್ ದ್ವಿವೇದಿಗೆ ಸೂಚಿಸಲಾಗಿದೆ.
ಬಿಜೆಪಿ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಕೋರ್ ಕಮಿಟಿ ಹಾಗೂ ವಿಪಕ್ಷ ನಾಯಕ ಸ್ಥಾನವೂ ಬದಲಾವಣೆಯಾಗುವ ಸಾಧ್ಯತೆಗಳಿದ್ದು, ಸಮುದಾಯ ಮತ್ತು ಕ್ಷೇತ್ರವಾರು ಜವಾಬ್ದಾರಿ ಹಂಚಿಕೆಗೆ ಪ್ಲಾನ್ ಮಾಡಲಾಗಿದೆ. ಸ್ಥಾನ ಕೈತಪ್ಪಿದರೂ ಮುಂದೆ ಒಳ್ಳೆಯ ಸ್ಥಾನಮಾನ ನೀಡುವುದಾಗಿ ವರಿಷ್ಠರು ಭರವಸೆ ನೀಡಿದ್ದು, ಯಾವುದೇ ಗೊಂದಲ ಅಥವಾ ಅಸಮಾಧಾನ ಮೂಡಿಸಿಕೊಳ್ಳದೆ ಪಕ್ಷಕ್ಕಾಗಿ ಕೆಲಸ ಮಾಡಲು ಮೊದಲೇ ತಿಳಿಸಿದ್ದಾರೆ ಎನ್ನಲಾಗಿದೆ.


















